Advertisement

ದೆಹಲಿಯಲ್ಲಿ ಆಪ್‌ ವಿರೋಧಿ ಅಲೆ?: ಠೇವಣಿ ಕಳೆದುಕೊಂಡ ಅಭ್ಯರ್ಥಿ!

02:22 PM Apr 13, 2017 | Team Udayavani |

ಹೊಸದಿಲ್ಲಿ : ಇಲ್ಲಿನ ರಜೌರಿ ಗಾರ್ಡನ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣಾ ಫ‌ಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಆಡಳಿತಾರೂಢ ಆಮ್‌ ಆದ್ಮಿ ಪಕ್ಷ  ಠೇವಣಿ ಕಳೆದುಕೊಂಡು ಮುಖಭಂಗಕ್ಕೀಡಾಗಿದೆ. 

Advertisement

 ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಗೆ 10 ದಿನ ಮುಂಚೆ ಪ್ರಕಟವಾದ ಫ‌ಲಿತಾಂಶ ಬಿಜೆಪಿಗೆ ಭಾರೀ ಉತ್ಸಾಹ ತಂದಿಟ್ಟಿದ್ದು, ಆಪ್‌ ಪಾಲಿಗೆ ಆತಂಕಕಾರಿ ಬೆಳವಣಿಗೆಯಾಗಿದೆ. 

ಬಿಜೆಪಿ -ಶಿರೋಮಣಿ ಅಕಾಲಿದಳದ ಮೈತ್ರಿ ಅಭ್ಯರ್ಥಿ ಮಂಜಿಂದರ್‌ ಸಿಂಗ್‌ ಸಿರ್ಸಾ ಅವರು ಕಾಂಗ್ರೆಸ್‌ ಅಭ್ಯರ್ಥಿ ಮೀನಾಕ್ಷಿ ಚಂಡೇಲಾ ಅವರನ್ನು 14,000 ಮತಗಳಿಂದ ಸೋಲಿಸಿದ್ದಾರೆ. ಚಲಾವಣೆಯಾದ 78,091 ಮತಗಳ ಪೈಕಿ ಆಪ್‌ಗೆ 10,243 ಮತಗಳು ಮಾತ್ರ ಲಭ್ಯವಾಗಿವೆ. 

ಆಪ್‌ ಶಾಸಕ ಜರ್ನೇಲ್‌ ಸಿಂಗ್‌ ಅವರು ಪಂಜಾಬ್‌ ವಿಧಾನಸಭಾ ಚುನಾವಣೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್‌ ಸಿಂಗ್‌ ಬಾದಲ್‌ ವಿರುದ್ಧ ಸ್ಫರ್ಧಿಸುವ ಸಲುವಾಗಿ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರ ತೆರವಾಗಿತ್ತು. 

ಜರ್ನೇಲ್‌ ಸಿಂಗ್‌ ಅವರ ನಡೆಗೆ ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಚುನಾವಣೆಯಲ್ಲಿ ತಮ್ಮ ಸಿಟ್ಟನ್ನು ಮತದಾರರು ಹೊರಹಾಕಿದ್ದಾರೆ. ಫ‌ಲಿತಾಂಶ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಭಾರೀ ಅಘಾತ ನೀಡಿದೆ.

Advertisement

ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ ಜರ್ನೇಲ್‌ ಅವರ ವಿರುದ್ಧದ ಜನರ ಸಿಟ್ಟಿನಿಂದಾಗಿ ನಮಗೆ ಸೋಲಾಗಿದೆ ಎಂದಿದ್ದಾರೆ. 

2015 ರಲ್ಲಿ ಕ್ಷೇತ್ರಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 12 % ಮತಗಳಿಸಿದ್ದರೆ ಈ ಬಾರಿ 33% ಮತ ಪಡೆದು ಉತ್ತಮ ಪೈಪೋಟಿ ನೀಡಿದೆ. 

ಗೆಲುವಿನಿಂದಾಗಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯ ಬಲ ನಾಲ್ಕಕ್ಕೆ ಏರಿದೆ. ಕಾಂಗ್ರೆಸ್‌ನ ಒಬ್ಬ ಶಾಸಕನೂ ವಿಧಾಸಭೆಯಲ್ಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next