ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂಬ ಹೇಳಿಕೆ ನೀಡಿದ ನಂತರ ನಮ್ಮ ಪಕ್ಷದವರೇ ನನ್ನನ್ನು ಬಹಳ ವ್ಯವಸ್ಥಿತವಾಗಿ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವೀಂದ್ರನಾಥ್,ಮಾಡಾಳ್ ವಿರೂಪಾಕ್ಷಪ್ಪ, ಗುರು ಸಿದ್ದನಗೌಡ ಎಲ್ಲರನ್ನೂ ಮುಗಿಸುವ ಕೆಲಸ ಸಿದ್ದೇಶ್ವರ್ ಮಾಡಿದ್ದಾರೆ ಎಂದರು.
ನಾನು ಸಹ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಂದಾಕ್ಷಣ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿನ ಸರ್ವಾಧಿಕಾರಿ ಧೋರಣೆ ಖಂಡಿಸಿದ್ದೇನೆ. ವಿನಾಕಾರಣ ನನ್ನ ವಿರುದ್ಧ ಅಪಪ್ರಚಾರ ಮಾಡ ಲಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಹೋಗುವವರು ಹೋಗಲಿ ಎಂಬುದಾಗಿ ಸಂಸದ ಸಿದ್ದೇಶ್ವರ ಹೇಳಿದ್ದಾರೆ. ಈವರೆಗೆ ಅಧಿಕೃತವಾಗಿ ಯಾರಿಗೂ ಲೋಕ ಸಭಾ ಟಿಕೆಟ್ ಘೋಷಣೆ ಮಾಡಿಲ್ಲ.ಪಕ್ಷದಲ್ಲಿ ಸಿದ್ದೇಶ್ವರ ಅವರಗಿಂತಲೂ ನಾನು ಸೀನಿಯರ್. ಸಿದ್ದೇಶ್ವರ ಅವರ ಬಗ್ಗೆ ಗೌರವ ಇದೆ. ನನಗಿಂತಲೂ ವಯಸ್ಸಿನಲ್ಲಿ ಹಿರಿಯರು.ಅವರ ತಂದೆ ಮಲ್ಲಿಕಾರ್ಜುನಪ್ಪ ಅವರ ಪರವಾಗಿ ಮೂರು, ಸಿದ್ದೇಶ್ವರ ಅವರ ಪರವಾಗಿ ನಾಲ್ಕು ಚುನಾವಣೆ ಮಾಡಿದ್ದೇನೆ. ಆದರೆ, ಬಹಳಷ್ಟು ಜನರನ್ನೂ ಮೂಲೆ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನನಗೆ ಫೋನ್ ಕರೆ ಮಾಡಿ ಪಕ್ಷ ಬಿಡುವ ಕುರಿತು ಮಾತನಾಡುತ್ತಿದ್ದಾರೆ. ಪಕ್ಷದಲ್ಲಿ ಸಮರ್ಥ ನಾಯಕತ್ವ ಇಲ್ಲದೇ ಇರು ವುದೇ ಇದಕ್ಕೆ ಕಾರಣ. ಹೊನ್ನಾಳಿ, ನ್ಯಾಮತಿ ಎರಡು ತಾಲೂಕುಗಳನ್ನು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿ ಸಿ ದ್ದೇನೆ. ಬಾಕಿ ಇರುವ ಅನುದಾನ ಮರು ಚಾಲನೆ ಕೊಡುವಂತೆ ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿದ್ದೇನೆಯೇ ಹೊರತು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಮ್ಮವರಿಗೇ ನಾನು ಬೇಡವೇನೋ ಅನಿಸುತ್ತೇ ಎಂದು ಬೇಸರದಿಂದ ಹೇಳಿದರು.
ಪಕ್ಷದ ನಾಯಕರ ಮೇಲೆ ನೋವಾಗಿದೆ. ಸರ್ಕಾರ ಇದ್ದಾಗ ಆರು ಸ್ಥಾನ ಖಾಲಿ ಇದ್ದರೂಸಚಿವ ಸ್ಥಾನ ಕೊಡಲಿಲ್ಲ. ಕಾಂಗ್ರೆಸ್ ನವರು ಏಕ ಕಾಲದಲ್ಲಿ ಮಂತ್ರಿ ಮಾಡಿದರು.ರಾಜೂ ಗೌಡ ಮತ್ತು ನನಗೂ ಅನ್ಯಾಯ ಮಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಎಸ್. ಎ.ರವೀಂದ್ರನಾಥ್ ಅವರಿಗೆ ಸಚಿವ ಸ್ಥಾನ ಕೊಡಬಹುದಿತ್ತು ಎಂದರು.
ಇದನ್ನೂ ಓದಿ: MSP ; ಗೋಧಿಗೆ ದಾಖಲೆಯ ಕ್ವಿಂಟಲ್‌ಗೆ 150 ರೂ.ಹೆಚ್ಚಿಸಿದ ಕೇಂದ್ರ ಸರಕಾರ