Advertisement
ಅವರು ಉಪ್ಪುಂದದಲ್ಲಿ ನಡೆದ ಚುನಾವಣೆಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯ ರಾಜಕೀಯದಲ್ಲಿ ಹೊಸತನವನ್ನು ಪರಿಚಯಿಸುವ ದೂರದೃಷ್ಟಿಯಿಂದ, ಮೋದಿ, ಅಮಿತಾ ಶಾ ಅವರು ಸಮರ್ಥ, ಯೋಗ್ಯ ಅಭ್ಯರ್ಥಿಯನ್ನು ಬೈಂದೂರಿಗೆ ನೀಡಿದ್ದಾರೆ. ಮೋದಿ ಅವರು ಬೈಂದೂರಿನ ಜನತೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಗುರುರಾಜ್ ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ ಎಂದರು. ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ
ಕ್ರಾಂಗ್ರೆಸ್ ಅಭ್ಯರ್ಥಿ 18 ವರ್ಷ ಅಧಿಕಾರ ನಡೆಸಿದ್ದಾರೆ, ಈದೀಗ ವಯಸ್ಸು ಆಗಿದೆ, ಕೊನೆಯ ಚುನಾವಣೆ ಎನ್ನುತ್ತಿದ್ದಾರೆ ಅವರಿಂದ ಅಭಿವೃದ್ಧಿ ಸಾಧ್ಯವೆ ಜನರು ಯೋಚಿಸಬೇಕು. ಬಿಜೆಪಿ ದೂರದೃಷ್ಟಿಯ ಯುವ ಅಭ್ಯರ್ಥಿಯನ್ನು ಬೈಂದೂರಿಗೆ ನೀಡಿದೆ, ಬಿಜೆಪಿಗೆ ಮತ ನೀಡಿ ಬೈಂದೂರಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗಬೇಕಿದೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು.
Related Articles
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸಿ, ಗೋ ಹತ್ಯೆ ನಿಷೇಧ ಕಾಯ್ದಿಯನ್ನು ವಾಪಾಸ್ಸು ತಗೆದುಕೊಳ್ಳುತ್ತದೆ, ಆಗ ರಾತ್ರಿ ಮನೆಗಳಿಗೆ ನುಗ್ಗಿ ಗೋ-ಕಳ್ಳತನ ವ್ಯಾಪಕಗೊಳ್ಳುವ ಸಾಧ್ಯತೆ ಹೆಚ್ಚು ಆದರಿಂದ ಮತದಾರರು ದೇಶ, ಧರ್ಮ ರಕ್ಷಣೆಗಾಗಿ ಮತದಾನ ಮಾಡಬೇಕು. ಗುರುರಾಜ್ ಗಂಟಿಹೊಳೆ ಅವರನ್ನು ಗೆಲ್ಲಿಸುವ ಮೂಲಕ ದೇಶಕ್ಕೆ ಒಂದು ಸಂದೇಶ ನೀಡುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
Advertisement
ಬೈಂದೂರಿನಲ್ಲಿ ಬಿಜೆಪಿ ಅಲೆಮೋದಿ ಅವರು ರಾಜ್ಯ ರಾಜಕೀಯ ಕ್ಷೇತ್ರಕ್ಕೆ ಹೊಸತನ, ತಾರುಣ್ಯ ಮತ್ತು ಮುಂದಿನ ಯುವಕರಿಗೆ ಪ್ರೇರಣೆ ಮೂಡಿಸುವುದಕ್ಕಾಗಿ ಮಹತ್ವದ ಸಂದೇಶ ಎಂಬಂತೆ ಬೈಂದೂರಿಗೆ ಜನಸಾಮಾನ್ಯ ವ್ಯಕ್ತಿಯ ಆಯ್ಕೆಗೆ ಜನತೆಯಲ್ಲಿ ಹೊಸ ಹುರುಪು, ಉತ್ಸಾಹ ಮೂಡಿಸಿರುವುದು ಕಂಡುಬಂದಿದೆ. ಕಾರ್ಯಕರ್ತರ ಅಬ್ಬರದ ಪ್ರಚಾರ, ಬಿಜೆಪಿಯ ಅçೆಯ ನಡುವೆ ಚಪ್ಪಲಿ ಹಾಕದ ಅಭ್ಯರ್ಥಿಯ ಶ್ರದ್ಧೆ, ಭಕ್ತಿಗೆ ಜನರು ಅಭಿಮಾನಗೊಂಡು ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಮಂಕಾಗಿದೆ ಎನ್ನುತ್ತಾರೆ ಕಾರ್ಯಕರ್ತರು. ಹುಟ್ಟು ಕಡು ಬಡತನ, ಹಸಿವು, ಸಂಪರ್ಕವೇ ಇಲ್ಲದ ಹಳ್ಳಿ ಬದುಕು, ಅನಕ್ಷರಸ್ಥ ಕುಟುಂಬ, ಕಷ್ಟಪಟ್ಟು ಅಲೆದು ಅಲೆದು ಪಡೆದ ಶಿಕ್ಷಣ ನನ್ನನ್ನು ಈ ಸಮಾಜವನ್ನೇ ಬದಲಾಯಿಸಬೇಕೆಂಬ ಏಕೈಕ ಗುರಿಯೊಂದಿಗೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕ್ಷೇತ್ರದ ಮೂಲೆ ಮೂಲೆಯಲ್ಲೂ ಜನರು ಬೆಂಬಲಿಸುತ್ತಿದ್ದಾರೆ, ಈಗ ನೀವು ನನಗಾಗಿ ಹೋರಾಟ ಮಾಡುತ್ತಿದೀªರಿ ಗೆಲುವಿನ ಬಳಿಕ ನಾನು ನಿಮಗಾಗಿ ಹೋರಾಡುತ್ತೇನೆ ಇದು ನನ್ನ ಸಂಕಲ್ಪ.
ಗುರುರಾಜ್ ಗಂಟಿಹೊಳೆ ಬಿಜೆಪಿ ಅಭ್ಯರ್ಥಿ ಸುಮಾರು 20ವರ್ಷ ಸಂಘಟನೆಗಾಗಿ ಸೇವೆ ಸಲ್ಲಿಸಿ ಈಶಾನ್ಯ ರಾಜ್ಯಗಳಿಗೆ ತೆರಳಿ ದಾರಿ ತಪ್ಪುವ ಯುವ ಜನರನ್ನು ಮನ ಒಲಿಸಿ, ವಿಧ್ಯಾಭ್ಯಾಸ ನೀಡಿ ಮಾದರಿಯಾಗಿದ್ದಾರೆ. ಬಿಜೆಪಿ ಇಂತಹ ವ್ಯಕ್ತಿಗೆ ಟಿಕೆಟ್ ನೀಡಿದೆ, ನಾಗರಿಕರು ಯೋಚಿಸಬೇಕು ನವ ಬೈಂದೂರಿನ ನಿರ್ಮಾಣಕ್ಕೆ ಶ್ರಮಿಕ ಜೀವಿಗೆ ಮತನೀಡಿ ದೊಡ್ಡ ಅಂತರದಿಂದ ಗೆಲ್ಲಿಸಬೇಕು.
ವಿಜಯ ಕೊಡವೂರು