Advertisement

BJP ಗೋಡೆ ಬರಹ ಅಭಿಯಾನ: ದಿಲ್ಲಿಯಲ್ಲಿ ನಡ್ಡಾ, ಬೆಂಗಳೂರಿನಲ್ಲಿ ವಿಜಯೇಂದ್ರ ಚಾಲನೆ

11:22 PM Jan 15, 2024 | Team Udayavani |

ಬೆಂಗಳೂರು/ಹೊಸದಿಲ್ಲಿ: ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೊಸದಿಲ್ಲಿಯಲ್ಲಿ “ಏಕ್‌ ಫಿರ್‌ ಸೇ ಮೋದಿ ಸರಕಾರ್‌’ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು. ಅವರು ಸ್ಥಳೀಯ ಮಾರುಕಟ್ಟೆಯ ಗೋಡೆಯೊಂದರ ಮೇಲೆ ಕಮಲದ ಚಿಹ್ನೆ ಬರೆದರು. ರಾಜ್ಯದಲ್ಲಿ “ಮತ್ತೊಮ್ಮೆ ಮೋದಿ’ ಗೋಡೆ ಬರಹ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು.

Advertisement

ಶೇಷಾದ್ರಿಪುರದ ಮಾರುತಿ ಆಸ್ಪತ್ರೆ ಬಳಿ ಗೋಡೆ ಬರಹ ಅಭಿಯಾನ ಆರಂಭವಾಯಿತು. ಲೋಕಸಭೆ ಚುನಾವಣೆಗೆ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟವಾಗುವ ತನಕ ಈ ಅಭಿಯಾನ ಮುಂದುವರಿಯಲಿದೆ. ಪ್ರತಿ ಬೂತ್‌ನಲ್ಲಿ ಇಂತಹ 10 ಗೋಡೆ ಬರಹಗಳನ್ನು ಬರೆಯಲಾಗುತ್ತದೆ.

ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ವಿಜಯೇಂದ್ರ, ಪ್ರಧಾನಿ ಮೋದಿಯವರ ವಿಕಸಿತ ಭಾರತದ ಸಂಕಲ್ಪಕ್ಕೆ ಜನರಿಂದ ಭಾರೀ ಬೆಂಬಲ ಸಿಕ್ಕಿದೆ. ಅದೇ ರೀತಿ ಅಭಿಯಾನಕ್ಕೂ ಸಹಕಾರ ಲಭಿಸುತ್ತದೆ. ಕೇಂದ್ರ ಸರಕಾರದ ಎಲ್ಲ ಜನಪರ ಯೋಜನೆ ಗಳು ಜನರಿಗೆ ತಲುಪುತ್ತಿವೆ. ಮೋದಿ ಯವರ ಕೊಡುಗೆ, ಸಾಧನೆಗಳು ಗೊತ್ತಿರುವ ಕಾರಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಅಪೇಕ್ಷಿಸುತ್ತಿದ್ದಾರೆ ಎಂದರು.

ಸೋಮಣ್ಣಗೆ ಬೆಂಬಲ
ಲೋಕಸಭೆ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಅವರು ಹೇಳಿ ದ್ದನ್ನು ಕಾರ್ಯಕರ್ತರಾಗಿ ನಾವು ಪಾಲಿಸುತ್ತೇವೆ. ವಿಧಾನಸಭೆ ಚುನಾ ವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತ ನೋವು ಮಾಜಿ ಸಚಿವ ಸೋಮಣ್ಣ ಅವರಿಗಷ್ಟೇ ಅಲ್ಲ, ನಮಗೂ ಇದೆ. ಪಕ್ಷದ ವರಿಷ್ಠರನ್ನು ಭೇಟಿಯಾದಾಗ ಅವರ ಮುಂದೆ ಏನು ಅಪೇಕ್ಷೆಯಿಟ್ಟಿದ್ದಾರೋ ಅದಕ್ಕೆ ಸಂಪೂರ್ಣ ಬೆಂಬಲವಿದೆ. ಈ ಬಗ್ಗೆ ವರಿಷ್ಠರ ಜತೆ ಚರ್ಚಿಸುವೆ ಎಂದರು.

ಹಾವೇರಿ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಬೇಕು. ಎಫ್ಐಆರ್‌ ದಾಖಲಿಸಲು ಒಂದು ವಾರ ವಿಳಂಬವಾಗಿರುವ ಕಾರಣ ಸ್ಥಳೀಯ ಪೊಲೀಸರ ಬಗ್ಗೆ ಸಂಶಯವಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಬೇಕು ಎಂದು ಆಗ್ರಹಿಸಿದರು.

Advertisement

ದಿಲ್ಲಿಯಲ್ಲಿ ಗೋಡೆ ಬರಹ ಬರೆದ ನಡ್ಡಾ
“ಏಕ್‌ ಬಾರ್‌ ಫಿರ್‌ ಸೇ ಮೋದಿ ಸರಕಾರ್‌’ ಅಭಿಯಾನಕ್ಕೆ ಹೊಸದಿಲ್ಲಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು. ಮತ್ತೂಮ್ಮೆ ಮೋದಿ ಸರಕಾರ ಅಧಿಕಾರಕ್ಕೇರುವುದೇ ಅಭಿಯಾನದ ಉದ್ದೇಶ ಎಂದು ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ನಮ್ಮ ಗೋಡೆ ಬರಹ ಅಭಿಯಾನಕ್ಕೆ ಇಂದು ದೇಶಾದ್ಯಂತ ಚಾಲನೆ ನೀಡಲಾಗಿದೆ. “ಏಕ್‌ ಬಾರ್‌ ಫಿರ್‌ ಸೇ ಮೋದಿ ಸರಕಾರ್‌’ ಬೂತ್‌ ಮಟ್ಟದಲ್ಲೂ ತೆರೆದುಕೊಳ್ಳಲಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಈ ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕು ಎನ್ನುವುದು ನಮ್ಮ ಉದ್ದೇಶ. ಈ ಘೋಷವಾಕ್ಯ 2024ರಲ್ಲಿ ಮತ್ತೆ ಮೋದಿ ಸರಕಾರ ಬರುವ ಅಗತ್ಯವನ್ನು ತನ್ನದೇ ರೀತಿಯಲ್ಲಿ ಮನವರಿಕೆ ಮಾಡಿಕೊಡುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next