Advertisement

BJP; ಸಂದೇಶ್‌ಖಾಲಿ ದೌರ್ಜನ್ಯಕ್ಕೆ ಮತಗಳಿಂದಲೇ ಉತ್ತರ: ಪಿಎಂ

11:47 PM Mar 01, 2024 | Team Udayavani |

ಆರಾಮಬಾಗ್‌/ರಾಂಚಿ: ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಿಂದ ಇಡೀ ದೇಶವೇ ಕ್ರೋಧದಿಂದ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಟಿಎಂಸಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದು, ಸಂದೇಶ್‌ಖಾಲಿ ಪ್ರಕರಣ ಸಂಬಂಧ ಮೌನ ವಹಿಸಿರುವ ಇಂಡಿಯಾ ಒಕ್ಕೂಟವನ್ನೂ ತರಾಟೆಗೆ ತೆಗೆದುಕೊಂಡರು.
ಹೂಗ್ಲಿ ಜಿಲ್ಲೆಯ ಆರಾಮಬಾಗ್‌ನಲ್ಲಿ 7,200 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಮೋದಿ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿದ ಬಳಿಕ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ, ಬಂಗಾಳದ ಜನರು ತಮಗಾದ ಗಾಯಕ್ಕೆ ಮತಗಳ ಮೂಲಕ ಉತ್ತರ ನೀಡಲಿದ್ದಾರೆ ಎಂದು ಹೇಳುವ ಮೂಲಕ ಚುನಾವಣಾ ಕಹಳೆಯನ್ನು ಮೊಳಗಿಸಿದರು.

Advertisement

“ಮಾ, ಮಾತಿ, ಮಾನುಷ’ ಎಂದು ಎದೆ ತಟ್ಟಿಕೊಳ್ಳುವ ಟಿಎಂಸಿ ಸಂದೇಶ್‌ಖಾಲಿ ದೌರ್ಜ ನ್ಯವನ್ನು ಇಡೀ ದೇಶವು ಆಕ್ರೋಶದಿಂದ ನೋಡುತ್ತಿದೆ ಎಂದರು. ಇದಕ್ಕೂ ಮುನ್ನ ಜಾರ್ಖಂಡ್‌ನಲ್ಲಿ 35,700 ಕೋಟಿ ರೂ.ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಬಡತನದಿಂದ 25 ಕೋಟಿ ಜನ ಪಾರು: ಪ್ರಧಾನಿ
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಇದು ಸರ್ಕಾರದ ಉದ್ದೇಶವು ಸರಿಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ನಮ್ಮ ಸರ್ಕಾರ ಸಾಗುತ್ತಿರುವ ದಾರಿ, ಕೈಗೊಳ್ಳುತ್ತಿ ರುವ ನೀತಿಗಳು, ನಿರ್ಧಾರಗಳು ಮತ್ತು ಮುಖ್ಯವಾಗಿ ನಮ್ಮ ಉದ್ದೇಶವು ಸರಿ ಯಾಗಿದೆ ಎಂಬುದನ್ನು ಈ ಸಾಧನೆ ಸಾದರ ಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next