Advertisement
ಸುರತ್ಕಲ್ ಎನ್‌ಐಟಿಕೆಯಲ್ಲಿ ಬಿಗಿ ಬಂದೋಬಸ್ತ್ನಲ್ಲಿ ಗುರುವಾರ ನಿಗದಿ ಯಂತೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ಎಣಿಕೆಯ ಆರಂಭದಿಂದಲೇ ನಳಿನ್ ಕುಮಾರ್ ಕಟೀಲು ಅವರು ನಿರಂತರ ಮುನ್ನಡೆ ಸಾಧಿಸುತ್ತಾ ಬಂದಿದ್ದರು.
Related Articles
Advertisement
ನೋಟಾದಲ್ಲಿ ಹೆಚ್ಚಳಅಭ್ಯರ್ಥಿಗಳು ಸಮ್ಮತವಾಗದಿದ್ದರೆ ಮತದಾನ ತಿರಸ್ಕರಿಸುವ ನೋಟಾವನ್ನು ಈ ಬಾರಿ 7,380 ಮಂದಿ ಮತ ಚಲಾಯಿಸಿದ್ದಾರೆ. ನಳಿನ್ ಕುಮಾರ್ ಕಟೀಲು ಅವರು 12 ಗಂಟೆಯ ವೇಳೆಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಸಂಜೆವರೆಗೆ ಉಪಸ್ಥಿತರಿದ್ದು, ಚುನಾ ವಣಾಧಿಕಾರಿಗಳಿಂದ ಆಯ್ಕೆ ದೃಢಪತ್ರವನ್ನು ಸ್ವೀಕರಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ. ಸುಳ್ಯದಲ್ಲಿ ಭಾರೀ ಮುನ್ನಡೆ
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಈ ಬಾರಿಯೂ ಸುಳ್ಯ ಅತ್ಯಧಿಕ ಮತಗಳ ಮುನ್ನಡೆಯನ್ನು ಒದಗಿಸಿ ಕೊಟ್ಟಿದೆ. ಇಲ್ಲಿ ನಳಿನ್, ಕಾಂಗ್ರೆಸ್‌ನ ಮಿಥುನ್ ರೈ ಅವರಿಗಿಂತ 47,159 ಅಧಿಕ ಮತಗಳನ್ನು ಪಡೆದರು. 2009 ಮತ್ತು 2014ರ ಚುನಾವಣೆಯಲ್ಲೂ ಸುಳ್ಯ ಅಧಿಕ ಮುನ್ನಡೆಯನ್ನು ಒದಗಿಸಿ ಕೊಡುವ ಮೂಲಕ ಬಿಜೆಪಿಯ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತ್ತು. 5 ವಿವಿ ಪ್ಯಾಟ್ ಎಣಿಕೆ: ಫಲಿತಾಂಶ ವಿಳಂಬ
ಇವಿಎಂಗಳ ಮತ ಎಣಿಕೆ ಜತೆಗೆ 5 ವಿವಿಪ್ಯಾಟ್ ಸ್ಲಿಪ್‌ಗ್ಳ ಎಣಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟ ವಿಳಂಬವಾಯಿತು. ಎಣಿಕೆ ಇದು ಪೂರ್ಣಗೊಂಡ ಬಳಿಕ ಫಲಿತಾಂಶ ಘೋಷಣೆ ಮಾಡಲಾಯಿತು. 2014ರ ಚುನಾವಣೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಒಂದು ವಿವಿಪ್ಯಾಟ್‌ಗಳ ಪೇಪರ್‌ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗಿತ್ತು. ಅಂಚೆ ಮತ: ಬಿಜೆಪಿಗೆ ಲೀಡ್
ಒಟ್ಟು 2,130 ಅಂಚೆ ಮತ ಗಳು ಚಲಾವಣೆಯಾಗಿದ್ದು, 1,531 ಮತಗಳು ಬಿಜೆಪಿ, 277 ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆದುಕೊಂಡಿದ್ದಾರೆ. 5 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. 308 ಮತಗಳು ಅಸಿಂಧುವಾಗಿವೆ. 11 ಮಂದಿಗೆ ಠೇವಣಿ ನಷ್ಟ
ಕಣದಲ್ಲಿದ್ದ ಅಭ್ಯರ್ಥಿಗಳ ಪೈಕಿ ನಳಿನ್ ಕುಮಾರ್ ಕಟೀಲು, ಮಿಥುನ್ ರೈ ಹೊರತುಪಡಿಸಿ ಉಳಿದ ಎಲ್ಲ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.