Advertisement
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ 23 ಸ್ಥಾನ ಮಾತ್ರ ಗೆದ್ದಿದೆ. ಕಾಂಗ್ರೆಸ್ 1 ಸ್ಥಾನ ಗೆದ್ದಿದ್ದರೆ, ದಶಕಗಳ ಕಾಲ ರಾಜ್ಯವನ್ನು ಆಳಿದ ಸಿಪಿಎಂ ಒಂದೂ ಸ್ಥಾನ ಗೆಲ್ಲದ ದುರಂತ ಪರಿಸ್ಥಿತಿ ಎದುರಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಮತಾ ದೀದಿ ಪಕ್ಷ 34 ಸ್ಥಾನ ಗೆದ್ದಿತ್ತು. ಈ ಬಾರಿ ಅದು 11 ಸ್ಥಾನ ಕಳೆದುಕೊಂಡಿದೆ.
Related Articles
Advertisement
ಸಿಂಗೂರ್‌ನಲ್ಲೇ ಬರಸಿಡಿಲು: 10 ವರ್ಷದ ಹಿಂದೆ ಹೂಗ್ಲಿ ಜಿಲ್ಲೆಯ ಸಿಂಗೂರ್‌ನಲ್ಲಿ ಮಮತಾ ಬ್ಯಾನರ್ಜಿ ಟಾಟಾ ಸಂಸ್ಥೆಯ ನ್ಯಾನೊ ಕಾರು ಘಟಕದ ವಿರುದ್ಧ ಭಾರೀ ಹೋರಾಟ ಮಾಡಿದ್ದರು. ಅದರ ಪರಿಣಾಮ ಇಡೀ ಬಂಗಾಳ ದಲ್ಲಿ ಟಿಎಂಸಿ ಹವಾ ಎದ್ದು, ಮಮತಾ ಒಂದೇ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರು. ಇದೀಗ ಸಿಂಗೂರ್ ಇರುವ ಹೂಗ್ಲಿಯಲ್ಲೇ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 2014ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟಿಎಂಸಿ ರತ್ನಾ ಡೆ ತೀವ್ರ ಕುಸಿತ ಅನುಭವಿಸಿದ್ದಾರೆ
ಗೆದ್ದ ಪ್ರಮುಖರು-ಬಾಬುಲ್ ಸುಪ್ರಿಯೊ, ಅಸಾನ್ಸೊಲ್
-ಅಭಿಷೇಕ್ ಬ್ಯಾನರ್ಜಿ,
-ಡೈಮಂಡ್ ಹಾರ್ಬರ್
-ದಿಲೀಪ್ ಘೋಷ್, ಮೇದಿನಿಪುರ
-ರಾಜು ಬಿಸ್ತಾ, ಡಾರ್ಜಿಲಿಂಗ್
-ಸೌಗತ ರಾಯ್, ಡಮ್ ಡಮ್ ಸೋತ ಪ್ರಮುಖರು
-ಎಸ್.ಎಸ್.ಅಹ್ಲುವಾಲಿಯಾ, ಬುದ್ವಾìನ್ ದುರ್ಗಾಪುರ
-ರಾಹುಲ್ ಸಿನ್ಹಾ, ಕೋಲ್ಕತ ಉತ್ತರ
-ಅಮರ್ ಸಿಂಗ್ ರೈ, ಡಾರ್ಜಿಲಿಂಗ್
-ಮನಸ್ ರಂಜನ್, ಮೇದಿನಿಪುರ
-ಮಫುಜಾ ಖಾತುನ್, ಜಂಗಿಪುರ ಗೆದ್ದವರಿಗೆ ಶುಭಾಶಯಗಳು. ಆದರೆ ಎಲ್ಲ ಸೋತವರು ಸೋತಿಲ್ಲ. ನಾವು ಎಲ್ಲವನ್ನೂ ಸಂಪೂರ್ಣವಾಗಿ ಪರಾಮರ್ಶೆ ನಡೆಸಬೇಕಾಗಿದೆ. ನಂತರ ಪ್ರತಿಕ್ರಿಯಿಸುತ್ತೇನೆ.
-ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕ, ಬಂಗಾಳ ಮುಖ್ಯಮಂತ್ರಿ ಆರಂಭದಲ್ಲಿ ಟಿಎಂಸಿ ವಿರೋಧಿ ಅಲೆಯ ಸುಳಿವು ಇತ್ತು. ಭಯಭೀತ ವಾತಾವರಣದ ನಡುವೆಯೇ ಬಂಗಾಳದಲ್ಲಿ ಜನರು ಬಿಜೆಪಿಯತ್ತ ಒಲವು ತೋರಿದ್ದಾರೆ. ಇದು ನರೇಂದ್ರ ಮೋದಿ ನಾಯಕತ್ವಕ್ಕೆ ಸಿಕ್ಕ ಜಯ.
-ಕೈಲಾಶ್ ವಿಜಯವರ್ಗೀಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ