Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲೂ ಸೂಕ್ತ ಅಭ್ಯರ್ಥಿಗಳಿಲ್ಲ. ಆದರೆ ಕಾಂಗ್ರೆಸ್ನಿಂದ ವಲಸೆ ಹೋಗುವ ಅಭ್ಯರ್ಥಿಗೆ ಮಣೆ ಹಾಕುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಎಷ್ಟು ಸತ್ಯ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ ಎಂದರು.
ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ರಾಜ್ಯದಲ್ಲಿ 22ಕ್ಕಿಂತಲೂ ಅಧಿಕ ಸೀಟುಗಳು ಬಿಜೆಪಿ ಪಾಲಾಗಲಿದೆ. ಜೆಡಿಎಸ್ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಲಿದ್ದಾರೆ. ಅಭ್ಯರ್ಥಿ ಹೆಸರು ಇನ್ನಷ್ಟೇ ಘೋಷಣೆಯಾಗಲಿದೆ. ಕಾರ್ಯಕರ್ತರೇ ಬಿಜೆಪಿ ಸೇನಾನಿಗಳು. ಪಕ್ಷವನ್ನು ಹೇಗೆ ಗೆಲ್ಲಿಸಬಹುದು ಎಂಬುದನ್ನು ನಾವು ಒಗ್ಗಟ್ಟಿನಿಂದ ತೋರಿಸಿಕೊಡಲಿದ್ದೇವೆ ಎಂದರು.