ಹೊಸದಿಲ್ಲಿ: ಹಾಲಿ ಸಂಸದೆ ನಟಿ ಹೇಮಾ ಮಾಲಿನಿ, ನಟ ಸುರೇಶ್ ಗೋಪಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್, ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಸೇರಿ ಹಲವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಲೋಕಸಭೆ ಕ್ಷೇತ್ರದ 3ನೇ ಬಾರಿಗೆ ಆಯ್ಕೆ ಬಯಸಿ ಹೇಮಮಾಲಿನಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ, 10 ವರ್ಷದಲ್ಲಿ ಯಮುನಾ ನದಿ ಸ್ವಚ್ಛ ಮಾಡುತ್ತೇವೆ ಎಂದರು.
ಸುರೇಂದ್ರನ್‌ಗೆ ಸ್ಮತಿ ಇರಾನಿ ಸಾಥ್: ವಯನಾಡ್‌ನಿಂದ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿಯ ಕೆ.ಸುರೇಂದ್ರನ್‌ಗೆ ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವೆ ಸ್ಮತಿ ಇರಾನಿ ಸಾಥ್ ನೀಡಿದರು. ತೃಶೂರ್ ಕ್ಷೇತ್ರದಲ್ಲಿ ನಟ ಸುರೇಶ್ ಗೋಪಿಗೆ ಸ್ಥಳೀಯ ನಾಯಕರು ಜತೆಯಾದರು.
ಕೇಂದ್ರ ಸಚಿವ ರಾಜೀವ್‌ಗೆ 2021ರಲ್ಲಿ ಕೇವಲ 680 ರೂ. ತೆರಿಗೆ ಆದಾಯ!
ಉದ್ಯಮಿಯೂ ಆಗಿರುವ ರಾಜೀವ್ ಚಂದ್ರಶೇಖರ್ ಕುಟುಂಬದ ಆಸ್ತಿಯು ಕಳೆದ ಐದು ವರ್ಷದಲ್ಲಿ 29 ಕೋಟಿ ರೂ. ಇಳಿಕೆ ಕಂಡಿದೆ. 2018ರಲ್ಲಿ 65 ಕೋಟಿ ರೂ. ಇದ್ದ ಆಸ್ತಿಯು ಈಗ 36 ಕೋಟಿ ರೂ. ಆಗಿದೆ. ಈ ಪೈಕಿ 13.64 ಕೋಟಿ ರೂ. ಚರಾಸ್ತಿ ಹಾಗೂ 14.4 ಕೋಟಿ ರೂ. ಸ್ಥಿರಾಸ್ತಿ ಇದೆ. ಅಲ್ಲದೇ, 2021-22ರ ವಿತ್ತ ವರ್ಷದಲ್ಲಿ ರಾಜೀವ್ ಅವರು ಕೇವಲ 680 ರೂ. ತೆರಿಗೆ ವ್ಯಾಪ್ತಿಯ ಆದಾಯ ಗಳಿಸಿದ್ದಾರೆ. ಅವರ ಹತ್ತಿರ ಕಾರಿಲ್ಲ. ಒಂದೇ ಒಂದು ವಿಂಟೇಜ್ ದ್ವಿಚಕ್ರ ವಾಹನ ವಿದೆ ಎಂದು ರಾಜೀವ್ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ.
ಬಿಟ್ ಕಾಯಿನ್ ಮೇಲೆ ‘ಕೈ’ನ ಶಶಿ ತರೂರ್ ಹೂಡಿಕೆ
ಕೈ ಅಭ್ಯರ್ಥಿ ಶಶಿ ತರೂರ್ ತಮ್ಮ ಬಳಿ 5.11 ಲಕ್ಷ ರೂ. ಮೌಲ್ಯದ ಬಿಟ್‌ಕಾಯಿನ್ ಹೊಂದಿ ರುವು ದಾಗಿ ತಿಳಿಸಿದ್ದಾರೆ. ಜತೆಗೆ 9.33 ಕೋಟಿ ರೂ. ಮೌಲ್ಯದ ಷೇರು , 3.46 ಕೋಟಿ ಕಾರ್ಪೊ ರೇಟ್ ಬಾಂಡ್‌ಗಳು, 91.7 ಲಕ್ಷ ರೂ. ಠೇವಣಿ ಹಾಗೂ 2 ಕೋಟಿ ರೂ. ಮೌಲ್ಯದ ಅಮೆರಿಕ ಟ್ರೆಜರಿ ಸೆಕ್ಯುರಿಟಿಸ್ ಹೊಂದಿದ್ದಾರೆ. ಅವರ ಬಳಿ 36,000 ನಗದು ಇದೆ. 49.3 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 6.75 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.