Advertisement

KPCC ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? ಡಿಕೆಶಿ ಗೆ BJP ಪ್ರಶ್ನೆ

07:46 PM Mar 27, 2021 | Team Udayavani |

ಬೆಂಗಳೂರು: ರಮೇಶ ಜಾರಕಿಹೊಳಿಯವರದು ಎನ್ನಲಾದ ಸಿಡಿ ಪ್ರಕರಣಕ್ಕೆ ಇಂದು ರೋಚಕ ತಿರುವು ಸಿಕ್ಕಿದೆ. ಸಿಡಿಯಲ್ಲಿದ್ದಾಳೆ ಎನ್ನಲಾಗುತ್ತಿರುವ ಯುವತಿಯ ಕುಟುಂಬದವರು ಇಂದು ಡಿಕೆಶಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಆರೋಪ ಹಾಗೂ ಪ್ರತ್ಯಾರೋಪಗಳು ಶುರುವಾಗಿವೆ.

Advertisement

ರಾಜ್ಯ ಬಿಜೆಪಿ ಸರಣಿ ಟ್ವೀಟ್‍ಗಳ ಮೂಲಕ ನೇರವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದೆ. ಯುವತಿಯ ಪೋಷಕರ ಮಾತುಗಳನ್ನು ಗಮನಿಸುವುದಾದರೆ ಸಂತ್ರಸ್ಥೆಯನ್ನು ಕೂಡಿಹಾಕುವ ಪೂರ್ವ ತಯಾರಿ ಕೆಪಿಸಿಸಿ ಕಚೇರಿಯಲ್ಲೇ ನಡೆದಿತ್ತಾ? ಸಂತ್ರಸ್ಥೆಯ ಪೋಷಕರು ನೇರವಾಗಿ ಡಿ.ಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ.

ಸೆಕ್ಷನ್‌ ಸ್ಪೆಷಲಿಸ್ಟ್  ಅವರೇ, ರಾಜಕೀಯ ಆಟಕ್ಕೆ ಸಂತ್ರಸ್ಥೆಯನ್ನು ಬಳಸಿಕೊಂಡದ್ದು ಯಾವ ಸೆಕ್ಷನ್‌ನಲ್ಲಿ ಅಪರಾಧ ಎಂದು ಬಿಡಿಸಿ ಹೇಳುವಿರಾ? ಎಂದು ಬಿಜೆಪಿ ಪ್ರಶ್ನಿಸಿದೆ.


ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡು ರಾಜಕೀಯ ಆಟ ಆಡುತ್ತಿರುವ ಮಾನ್ಯ ಡಿಕೆ ಶಿವಕುಮಾರ್  ಅವರೇ, ನಿಮ್ಮದೆಂತಹ ಕುತ್ಸಿತ ಮನೋಸ್ಥಿತಿ ಇರಬಹುದು? ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? ಸಂತ್ರಸ್ಥೆಯ ಕುರಿತು ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್‌ ನಾಯಕರು ಈಗೆಲ್ಲಿದ್ದಾರೆ?

Advertisement

ಎಲ್ಲವನ್ನೂ ತಾನೇ ಮುಂದೆ ನಿಂತು ಮಾಡಿಸುತ್ತಾರೆ, ಸದನದಲ್ಲಿ ಬೊಬ್ಬಿರಿಯುತ್ತಾರೆ, ಸುಭಗನಂತೆ ನಟಿಸುತ್ತಾರೆ. ಮಹಾನಾಯಕ ಡಿಕೆ ಶಿವಕುಮಾರ್ ಅವರೇ, ನಿಮಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟುಬಿಡಿ. ಒತ್ತೆಯಲ್ಲಿಟ್ಟುಕೊಂಡಿರುವ ಸಂತ್ರಸ್ತೆಯನ್ನು ಬಿಟ್ಟುಬಿಡಿ, ತನಿಖೆಗೆ ಸಹಕರಿಸಿ ಎಂದು ಸವಾಲು ಹಾಕಿದೆ.

ರಾಜೀನಾಮೆ ನೀಡಲು ಇನ್ನೆಷ್ಟು ಕಾಲ ಬೇಕು ಎಂದು ಪ್ರಶ್ನಿಸಿರುವ ಬಿಜೆಪಿ, ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ ನಿಮ್ಮ ಮೇಲೆ ಇದೆ. ಇಷ್ಟೆಲ್ಲಾ ಮಾಡಿಯೂ ಸದನದಲ್ಲಿ ಹೇಗೆ ಮುಖ ಇಟ್ಟುಕೊಂಡು ಸಿಡಿ ವಿಚಾರವಾಗಿ ಮಾತನಾಡಿದ್ದೀರಿ? ತಕ್ಷಣವೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next