ಕೊಪ್ಪಳ: ಮತದಾರರ ಮತಗಳನ್ನ ಬಿಜೆಪಿ ಕಳ್ಳತನ ಮಾಡುವ ಕೆಲಸ ಮಾಡಿದ್ದಾರೆ. ಆದರೆ ಅವರು ನ್ಯಾಯಾಂಗ ತನಿಖೆ ಮಾಡಿಸಲು ಒಪ್ಪುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ ತಾಲೂಕಿನ ವಣ ಬಳ್ಳಾರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಚಿಲುಮೆ ಎನ್ನುವ ಸಂಸ್ಥೆಗೆ ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಡಲಿ, ಅದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ಚಿಲುಮೆ ಸಂಸ್ಥೆ ಖಾಸಗಿ ಜನರನ್ನು ಬಿಎಲ್ಒಗಳನ್ನ ನೇಮಕ ಮಾಡಿಕೊಂಡಿದ್ದಾರೆ. ಕಾನೂನು ಪ್ರಕಾರ ಖಾಸಗಿ ಜನರನ್ನ ನೇಮಕ ಮಾಡಿಕೊಳ್ಳಲು ಆಗುವುದಿಲ್ಲ ಎಂದರು.
ಬಿಜೆಪಿಗೆ ಸೋಲುವೆವು ಎನ್ನುವ ಭಯ ಶುರುವಾಗಿದೆ. ಆದರೆ 28 ಕ್ಷೇತ್ರದಲ್ಲಿ ಮತದಾರರ ಹೆಸರು ಡಿಲೀಟ್ ಮತ್ತು ಸೇರ್ಪಡೆ ಮಾಡಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 50-60 ಸಾವಿರ ಜನರ ಹೆಸರು ಡಿಲೀಟ್ ಮಾಡಿದ್ದಾರೆ. ಅವರಿಗೆ ಮತ ಹಾಕಲ್ಲ ಎನ್ನುವವರನ್ನ ನೋಡಿ ಡಿಲೀಟ್ ಮಾಡಿದ್ದಾರೆ. ಅಹಿಂದ ವರ್ಗದವರ ಮತ ಡಿಲೀಟ್ ಆಗಿವೆ. ಅದಕ್ಕೆ ನಾವು ಇದನ್ನು ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ. ಆದರೆ ಇದಕ್ಕೆ ಅವರು ಉತ್ತರ ಕೊಡುತ್ತಿಲ್ಲ. ಅವರ ಇಲಾಖೆಯಲ್ಲಿ ಅಕ್ರಮ ನಡೆದರೆ ಅದಕ್ಕೆ ಜವಾಬ್ದಾರರು ಯಾರು? ಅವರೇ ಉತ್ತರ ಕೊಡಬೇಕು ಎಂದರು.
ಇದನ್ನೂ ಓದಿ:
ಶ್ರೀರಾಮುಲು ಸವಾಲ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆತನೊಬ್ಬ ಪೆದ್ದ ಆತನಿಗೆ ನಾನು ಉತ್ತರ ಕೊಡಲ್ಲ ಎಂದರು.