Advertisement

ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ 370ನೇ ವಿಧಿ ರದ್ದು : ಅಮಿತ್‌ ಶಾ

09:54 AM May 14, 2019 | Sathish malya |

ಶಿಮ್ಲಾ : ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಿ ಚುನಾಯಿತರಾದರೆ ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪುನರುಚ್ಚರಿಸಿದ್ದಾರೆ.

Advertisement

ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅಮಿತ್‌ ಶಾ, ಪಾಕಿಸ್ತಾನ ಐವರು ಭಾರತೀಯ ಸೈನಿಕರ  ತಲೆ ಕಡಿದಾಗ ಆಗಿನ ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಏನೂ ಮಾಡಿರಲಿಲ್ಲ; ಆದರೆ ಅದೇ ಮೋದಿ ಆಡಳಿತೆಯಲ್ಲಿ ಬಾಲಾಕೋಟ್‌ ಮೇಲೆ ಭಾರತ ಪ್ರಬಲ ವಾಯು ದಾಳಿ ನಡೆಸಿ ಅಲ್ಲಿನ ಉಗ್ರರನ್ನೂ,  ಅವರ ತರಬೇತಿ ಶಿಬಿರಗಳನ್ನೂ ನಾಶ ಮಾಡಿತು ಎಂದು ಹೇಳಿದರು.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿನ ಛೋಗನ್‌ ಮೈದಾನದಲ್ಲಿ ಸಾರ್ವಜನಿಕ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಿದ್ದ ಅಮಿತ್‌ ಶಾ, ಕಾಂಗ್ರೆಸ್‌ ನ ಹಿರಿಯ ನಾಯಕ ಸ್ಯಾಮ್‌ ಪಿತ್ರೋಡ ಅವರು “ವಾಯು ದಾಳಿಗೆ ಬದಲಾಗಿ ನಾವು ಉಗ್ರರೊಂದಿಗೆ ಮಾತುಕತೆ ನಡೆಸಬೇಕು’ ಎಂದು ಹೇಳಿರುವುದು ಖಂಡನೀಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next