Advertisement

ಶನಿವಾರಸಂತೆ ಬಿಜೆಪಿ ಬಹಿರಂಗ ಸಭೆ; ಅಪ್ಪಚ್ಚು ರಂಜನ್‌ ಮತಯಾಚನೆ

07:45 AM May 03, 2018 | Team Udayavani |

ಶನಿವಾರಸಂತೆ: ಈ ಹಿಂದೆ ರಾಜ್ಯದಲ್ಲಿ ಜನಪ್ರಿಯತೆಯ ಆಡಳಿತವನ್ನು ನಡೆಸಿದ್ದ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲು  ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್‌ ಮತದಾರರಲ್ಲಿ ಮನವಿ ಮಾಡಿದರು. ಅವರು ಸ್ಥಳೀಯ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಮಠ ಮಂದಿರಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲು ಚಿಂತನೆ ಹರಿಸುವ ಮೂಲಕ ರಾಜ್ಯದಲ್ಲಿ ಸಂಸ್ಕೃತಿ, ಆದ್ಯಾತ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕಾರ್ಯವನ್ನು  ಮಾಡಿದ್ದಾರೆ, ಇದರಿಂದ ರಾಜ್ಯ ಪ್ರಗತಿ ಸಾಧಿಸಿಲ್ಲ ಎಂದು ದೂರಿದರು. ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಕೋಮು ಗಲಭೆ, ಅತ್ಯಾಚಾರ, ಕೊಲೆ, ಸುಲುಗೆ ಮುಂತಾದ ಅಪರಾಧ ಚಟುವಟಿಕೆಗಳಿಗೆ ಪೊತ್ಸಾಹ ನೀಡಿದೆ, ಇದರಿಂದ ನಮ್ಮ ರಾಜ್ಯ ದಶಕಗಳ ಹಿಂದೆ ಕೊಲೆ ಸುಲುಗೆಗಳಿಗೆ ಹೆಸರುವಾಸಿಯಾಗಿದ್ದ ಬಿಹಾರ ರಾಜ್ಯದಂತಾಗಿದೆ, ಶಾಂತಿಗೆ ಹೆಸರುವಾಸಿಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಜಿಲ್ಲೆಯನ್ನೆ ಅಶಾಂತಿಯನ್ನುಂಟು ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು. 

ಬಸವಪಟ್ಟಣ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ-ಯಾವುದೆ ಸರಕಾರಗಳು ಸಮಾಜದಲ್ಲಿ ಧಾರ್ಮಿಕ, ಆದ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಸಮಾನತೆಯನ್ನು ಕಲ್ಪಿಸಿಕೊಡುವಂತಹ ಆಡಳಿತವನ್ನು ಕೊಡಬೇಕು, ಆದÃ ಸಿದ್ದರಾಮಯ್ಯ ನೇತƒತ್ವದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಧರ್ಮವನ್ನು ಒಡೆಯುವುವಂತಹ ಕಾರ್ಯವನ್ನು ಮಾಡುವ ಮೂಲಕ ಒಂದು ಧರ್ಮ ಮತ್ತು ಒಂದು ವರ್ಗಗಳಿಗೆ ಮೀಸಲಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಮಠ ಧಾರ್ಮಿಕ ಕೇಂದ್ರಗಳನ್ನು ಮೌಡ್ಯದ ಹೆಸರಿನಲ್ಲಿ ಮುಟ್ಟುಗೋಲು ಹಾಕಲು ಯತ್ನಿಸಿದ ಮುಖ್ಯಂತ್ರಿ ಸಿದ್ದರಾಮಯ್ಯ ಇದೀಗ ಚುನಾವಣೆ ಸಂದರ್ಭದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿರುವ ದೇವಸ್ಥಾನ, ಗುಡಿ ಗೋಪುರಗಳಿಗೆ ಹೋಗಿ ಹೋಮ ಹವನ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರ ಬಗ್ಗೆ ಕುಹಕವಾಡುವ ಸಿದ್ದರಾಮಯ್ಯ ಅವರಿಗೆ ಕನಿಷ್ಟ ಸಂಸ್ಕಾರ ಏನೆಂದು ಗೊತ್ತಿಲ್ಲ, ಟಿಪ್ಪು ಜಯಂತಿ  ಮೂಲಕ ಧರ್ಮ ಧರ್ಮದಲ್ಲಿ ಒಡಕು ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಜ್ಞಾನ ಇಲ್ಲಎಂದರು.

ಮಾಜಿ ಎಂಎಲ್‌ಸಿ ಎಸ್‌.ಜಿ.ಮೇದಪ್ಪ ಮಾತನಾಡಿ ಭಾರಿಯ ಚುನಾವಣೆಯಲ್ಲಿಮತದಾರರು ಕಾಂಗ್ರೆಸ್‌ ದುರಾಡಳಿತವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವನ್ನು ತಿರಷ್ಕರಿಸಿ ಬಿಜೆಪಿಯನ್ನು ಬೆಂಬಲಿಸಿದರೆ ಕೊಡಗು ಜಿಲೆಯ್ಲ 2 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಆಡಳಿತ ನಡೆಸುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ, ಈ ನಿಟ್ಟಿನಲ್ಲಿ ಬೂತ್‌ ಸಮಿತಿಯ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಮತದಾರರನ್ನು ಜಾಗƒತಿಗೊಳಿಸುವಂತೆ ಮನವಿ ಮಾಡಿದರು.

Advertisement

ತಾ.ಪಂ.ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್‌ ಬಿಜೆಪಿ ಪ್ರಮುಖರಾದ ಎಸ್‌.ವಿ.ಭರತ್‌ಕುಮಾರ್‌, ಜಿ.ಪಂ.ಸದಸ್ಯೆ ಸರೋಜಮ್ಮ, ಉಷಾ ತೇಜಸ್ವಿ, ಕೆ.ವಿ.ಮಂಜುನಾಥ್‌, ಜೆ.ಸಿ.ಶೇಖರ್‌, ಭುವನೇಶ್ವರಿ, ಜಲಜಶೇಖರ್‌, ಶನಿವಾರಸಂತೆ ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷ ಮಹಮದ್‌ಗೌಸ್‌, ಎಸ್‌.ಎನ್‌.ರಘು, ಶನಿವಾರಸಂತೆ ಹೋಬಳಿ ಬಿಜೆಪಿ ಅಧ್ಯಕ್ಷ ಯತೀಶ್‌ ಉಪ ಸ್ಥಿ ತ ರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next