Advertisement

ಶರತ್‌ ಹತ್ಯೆ: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

01:20 AM Jul 09, 2017 | Team Udayavani |

ಉಡುಪಿ: ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಅವರ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡುವಂತೆ ರಾಜ್ಯ ಸರಕಾರವನ್ನು ಮತ್ತು ರಾಜ್ಯಪಾಲರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಒತ್ತಾಯಿಸಿದ್ದಾರೆ. 

Advertisement

ಶರತ್‌ ಶವಯಾತ್ರೆ ಸಂದರ್ಭ ಕೈಕಂಬದಲ್ಲಿ ಶಾಂತಿಯುತ ಮೆರವಣಿಗೆ ಮೇಲೆ ಕಲ್ಲೆಸೆದು ಶವಯಾತ್ರೆಯಲ್ಲೂ ಕೋಮು ಗಲಭೆ ಸೃಷ್ಟಿಸಿ ಉದ್ದಿಗ್ನ ಸ್ಥಿತಿಯನ್ನು ನಿರ್ಮಾಣ ಮಾಡಿದ ದುಷ್ಕರ್ಮಿಗಳು ಕ್ಷಮಾರ್ಹರಲ್ಲ. ಇದರ ಹಿಂದೆ ಕಾಂಗ್ರೆಸ್‌ ನಾಯಕರು, ಉಸ್ತುವಾರಿ ಸಚಿವರು, ಶಾಸಕರು ಇದ್ದು ಎಲ್ಲಿಯ ತನಕ ಅವರು ದುಷ್ಕರ್ಮಿಗಳಿಗೆ ಬೆಂಬಲ ಕೊಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯ ತನಕ ದ.ಕ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಷ್ಟ. ಸಚಿವ ರಮಾನಾಥ ರೈ ರಾಜೀನಾಮೆ ಕೊಡಬೇಕು. ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಉಳಿದಿಲ್ಲ ಎಂದು ಹೆಗ್ಡೆ ಮತ್ತು ಬಿಜೆಪಿ ನಾಯಕ ಉದಯಕುಮಾರ ಶೆಟ್ಟಿ ಆರೋಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next