Advertisement

ಪಶ್ಚಿಮ ಬಂಗಾಲದಲ್ಲಿ ಉದ್ವಿಗ್ನ ಸ್ಥಿತಿ ; ಹಲವೆಡೆ ಬಿಜೆಪಿ-ಟಿಎಂಸಿ ಘರ್ಷಣೆ

08:47 AM May 01, 2019 | Vishnu Das |

ಕೋಲ್ಕತಾ: ನಾಲ್ಕನೇ ಹಂತದ ಮತದಾನ ನಡೆದ ಮರುದಿನ ಮಂಗಳವಾರ ಪಶ್ಚಿಮ ಬಂಗಾಳದ ಹಲವೆಡೆ ಬಿಜೆಪಿ ಮತ್ತುತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.

Advertisement

ಬಿಭುìಮ್‌ನಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು ಬಿಜೆಪಿ ಮತ್ತು ಟಿಎಂಸಿ ಮಾರಾಮಾರಿಯಲ್ಲಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಜೆಪಿ ಪೊಲೀಂಗ್‌ ಎಜೆಂಟ್‌ರನ್ನು ಗುರಿಯಾಗಿರಿಸಿ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದು, ಈ ವೇಳೆ ಘರ್ಷಣೆ ನಡೆದಿದೆ.

ಮಲ್ಲಾರ್‌ಪುರ್‌ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಕೈ ಬೆರಳನ್ನೇ ಕತ್ತರಿಸಿ ಹಾಕಿರುವ ಬಗ್ಗೆ ವರದಿಯಾಗಿದೆ.

ಘರ್ಷಣೆ ಸಂಭವಿಸಿದ ಮಲ್ಲಾರ್‌ಪುರ್‌ , ಬಿರ್ಭುಮ್‌ಭ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯ ಪೊಲೀರನ್ನು ನಿಯೋಜಿಸಲಾಗಿದೆ.

Advertisement

ಸೋಮವಾರವೂ ಅಸನ್ಸೋಲ್‌ ಮತ್ತು ಬಿರ್ಭುಮ್‌ನಲ್ಲಿ ಭಾರೀ ಹಿಂಸಾಚಾರಗಳು ಸಂಭವಿಸಿದ್ದವು.

ಬಿಜೆಪಿ ಪೋಲ್‌ ಎಜೆಂಟ್‌ಗಳನ್ನು ಮತಗಟ್ಟೆಗೆ ತೆರಳದಂತೆ ಟಿಎಂಸಿ ಕಾರ್ಯಕರ್ತರು ತಡೆದಿದ್ದಾರೆ ಎಂದು ಬಿಜೆಪಿ ಸಂಸದ ಬಬುಲ್‌ ಸುಪ್ರೀಯೋ ಆರೋಪಿಸಿದ್ದರು.

ಸೋಮವಾರ ನಡೆದ 8 ಸ್ಥಾನಗಳ ಚುನಾವಣೆಯಲ್ಲಿ 76.66 ರಷ್ಟು ಮತದಾನ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next