Advertisement

ಉಪಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ: ಹಾನಗಲ್ ಗೆ ಅಚ್ಚರಿಯ ಆಯ್ಕೆ

09:12 AM Oct 07, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅ.30ರಂದು ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಸಿಂದಗಿ ಕ್ಷೇತ್ರದಿಂದ ರಮೇಶ್ ಭೂಸನೂರು ಮತ್ತು ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಅಚ್ಚರಿಯೆಂಬಂತೆ ಶಿವರಾಜ್ ಸಜ್ಜನರ್ ಅವರನ್ನು ಕಣಕ್ಕೆ ಇಳಿಸಿಲಾಗಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆ ಹಾವೇರಿಯ ಹಾನಗಲ್ ಉಪ ಚುನಾವಣೆಗೆ ಅಚ್ಚರಿಯ ಘೋಷಣೆ ಮಾಡಲಾಗಿದೆ. ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉದಾಸಿ ಅವರ ಸೊಸೆ, ಸಂಸದ ಶಿವಕುಮಾರ್ ಉದಾಸಿ ಅವರ ಪತ್ನಿ ರೇವತಿ ಉದಾಸಿ ಅವರ ಹೆಸರು ಕೇಳಿಬಂದಿತ್ತು. ಬೆಳಗಾವಿ ಲೋಕಸಭಾ ಉಪಚುನಾವಣೆಯಂತೆ ಹಾನಗಲ್ ನಲ್ಲೂ ಅನುಕಂಪದ ಆಧಾರದ ಮೇಲೆ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗು ಮಾಡಿದ ಬಿಜೆಪಿ ವರಿಷ್ಠರು ಮಾಜಿ ಶಾಸಕ ಹಾಗೂ ಎಂಎಲ್ ಸಿ ಶಿವರಾಜ್ ಸಜ್ಜನರ್ ಗೆ ಟಿಕೆಟ್ ನೀಡಿದೆ.

ಇದನ್ನೂ ಓದಿ:ಸಿವಿಲ್‌ ಡ್ರೆಸ್‌ನಲ್ಲಿ ಪೊಲೀಸರ ಗಸ್ತು; ಕಾಲೇಜು ಆವರಣದಲ್ಲಿ ಡ್ರಗ್ಸ್‌ ದಂಧೆಗೆ ಕಡಿವಾಣ

ಈ ಹಿಂದೆ ಶಿವರಾಜ್ ಅವರನ್ನು ದಿವಂಗತ ಸಿಎಂ ಉದಾಸಿ ಬಿಜೆಪಿಗೆ ಕರೆದುಕೊಂಡು ಬಂದು ಸೂಕ್ತ ರಾಜಕೀಯ ಸ್ಥಾನಮಾನ ನೀಡಿದ್ದರು. 2004 ರಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 2013- 2018ರಲ್ಲಿ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ.

ಸಿಂದಗಿ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮಾಜಿ ಶಾಸಕ ರಮೇಶ್ ಭೂಸನೂರು ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಅ.30ರಂದು ಉಪ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next