Advertisement
ಪಟ್ಟಣದಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚಿಸಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಖಂಡರು ಅಂತರ್ಜಾಲ ತಾಣವನ್ನು ಬಳಸಿಕೊಂಡು ಕ್ಷುಲ್ಲಕ ವಿಷಯಕ್ಕೆ ಸಮಾಜದಲ್ಲಿನ ಶಾಂತಿಗೆ ಭಂಗತರುವಂತ ಕಾರ್ಯದಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವುದಾದರೆ ನೇರವಾಗಿ ಬನ್ನಿ ಎಂದು ಸವಾಲು ಹಾಕಿದ ಶಾಸಕರು ಇಂತಹ ಅಪಪ್ರಚಾರದಲ್ಲಿ ತೊಡಗುವ ಕೋಮುವಾದಿ ಬಿಜೆಪಿಗೆ ಮೇ 12ರಂದು ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಿ ಬಿಜೆಪಿಗೆ ಉತ್ತರ ನೀಡಬೇಕು ಎಂದರು.
Related Articles
Advertisement
ಸಿಂಧನೂರು-ಮಸ್ಕಿ, ಸಿಂಧನೂರು-ತಾವರಗೇರಾ ಹೆದ್ದಾರಿ ಅಭಿವೃದ್ಧಿ, ಬಳಗಾನೂರು ತುರ್ವಿಹಾಳ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಸ್ಕಿ ಬಳಗಾನೂರ ರಸ್ತೆ ಸುದಾರಣೆ ಸೇರಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದೇನೆ. ಮತದಾರರು ತಮಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ತಂದು ದೇಶವನ್ನು ಉಳಿಸಬೇಕು ಎಂದು ವಿನಂತಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಪ್ರಧಾನಿ ಮೋದಿ ಸರಕಾರ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ. ಕೋಮು ಗಲಭೆ ಸೃಷ್ಟಿಸಿ ದೇಶದಲ್ಲಿ ಅಶಾಂತಿ ನಿರ್ಮಿಸುತ್ತಿದೆ. ಆದ್ದರಿಂದ ಮತದಾರರು ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಪ್ರತಾಪಗೌಡರಿಗೆ ಹ್ಯಾಟ್ರಿಕ್ ಗೆಲುವು ದೊರಕಿಸಬೇಕು.
ಬಿಜೆಪಿ ತಿರಸ್ಕರಿಸಬೇಕು ಎಂದರು. ಮುಖಂಡರಾದ ಮಲ್ಲನಗೌಡ ಮಸ್ಕಿ, ಅಂದಾನೆಪ್ಪ ಗುಂಡಳ್ಳಿ, ಎಪಿಎಂಸಿ ಮಾಜಿ ನಿರ್ದೇಶಕ ಶೇಖರಪ್ಪ ಮೇಟಿ, ಡಾ| ಬಸವಲಿಂಗಪ್ಪ ದಿವಟರ, ಪಪಂ ಅಧ್ಯಕ್ಷೆ ಗಂಗಮ್ಮ ಲಡ್ಡೀನ, ಕಾಂಗ್ರೆಸ್ ತಾಲೂಕು ಮಹಿಳಾ ಅಧ್ಯಕ್ಷೆ ನಾಗಲಕ್ಷ್ಮೀ, ಬಸಪ್ಪ ಬ್ಯಾಳಿ, ಗ್ರಾಪಂ ಅಧ್ಯಕ್ಷ ಯಂಕಣ್ಣ ಕಮತರ, ಮಸ್ಕಿ ಯುವ ಕಾಂಗ್ರೆಸ್ ಅಧ್ಯಕ್ಷ ವೀರೇಶ ಕಮತರ, ಮಸ್ಕಿ ತಾಲೂಕು ಗ್ರಾಮೀಣ ಘಟಕದ ಬಸವರಾಜಸ್ವಾಮಿ ಹಸಮಕಲ್, ನಿರುಪಾದೆಪ್ಪವಕೀಲರು, ಸೇರಿ ಗೌಡನಬಾವಿ, ಉದಾºಳ ಸುತ್ತಲಿನ ಗ್ರಾಮದ ಕಾರ್ಯಕರ್ತರು ಪಾಲ್ಗೊಂಡಿದ್ದರು.