Advertisement
ಹೊಸದಿಲ್ಲಿಯಲ್ಲಿ ಮೊದಲ ಬಾರಿಗೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, 75ನೇ ವರ್ಷಕ್ಕೆ ಮೋದಿ ನಿವೃತ್ತರಾಗಲಿದ್ದಾ ರೆಂಬ ಕೇಜ್ರಿವಾಲ್ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು. ಒಂದು ವೇಳೆ ನನ್ನ ಉತ್ತರಾಧಿಕಾರಿ ಯಾರಾದರೂ ಇದ್ದರೆ ಅವರು ದೇಶದ 140 ಕೋಟಿ ಜನರು ಎಂದು ಹೇಳಿದರು. ದಿಲ್ಲಿಯನ್ನು ನಾಶ ಮಾಡಲು ಕಾಂಗ್ರೆಸ್ ಮತ್ತು ಆಪ್ ಪಣ ತೊಟ್ಟಿವೆ. ಜನರ ವಿಶ್ವಾಸ ಹಾಳಾಗಲು ಮತ್ತು ರಾಜ ಕೀಯ ಗುಣಮಟ್ಟ ಕುಸಿ ಯಲು ಕಾಂಗ್ರೆಸ್, ಆಪ್ ಕಾರಣ ಎಂದು ದೂರಿದರು.
Related Articles
ಪ್ರಧಾನಿ ನರೇಂದ್ರ ಮೋದಿ ತಮ್ಮ ನೆಚ್ಚಿನ ಪತ್ರಕರ್ತರಿಗೆ ಸಾಲು ಸಾಲು ಸಂದರ್ಶನ ನೀಡುತ್ತಿದ್ದಾರೆ. ಆದರೆ ನನ್ನೊಂದಿಗೆ ಚರ್ಚೆ ಮಾಡಲು ತಯಾರಿಲ್ಲ. ಯಾಕೆಂದರೆ ಅದಾನಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮೋದಿ ಬಳಿ ಉತ್ತರವೇ ಇಲ್ಲ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
Advertisement
ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅದಾನಿ-ಅಂಬಾನಿ ಯಿಂದ ಕಾಂಗ್ರೆಸ್ ಟೆಂಪೋ ತುಂಬ ಹಣ ಪಡೆದಿದೆ ಎಂದು ಆರೋಪಿಸುತ್ತಾರೆ. ಆದರೆ ಈ ಕುರಿತು ತನಿಖೆ ನಡೆಸುವ ಧೈರ್ಯವಿಲ್ಲ ಎಂದು ಹೀಗಳೆದರು.
ಪ್ರಧಾನಿ ಜತೆ ಚರ್ಚೆಗೆ ಸಿದ್ಧ. ನನ್ನ ಮೊದಲನೇ ಪ್ರಶ್ನೆ ಅದಾನಿ ಜತೆಗಿನ ಸಂಬಂಧ ಯಾವ ರೂಪದ್ದು ಮತ್ತು 2ನೇ ಪ್ರಶ್ನೆ ಚುನಾವಣೆ ಬಾಂಡ್‌ಗಳ ಕುರಿತಾಗಿ ರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ನಮಗೆ ಹೇಡಿಗಳು ಬೇಡ:
ನಮಗೆ ಹೇಡಿಗಳು ಬೇಡ. ನಮಗೆ ಬಬ್ಬರ್ ಶೇರ್(ಸಿಂಹ)ಗಳು ಬೇಕು. ಸಿಬಿಐ-ಇ.ಡಿ.ಗೆ ಹೆದರುವವರು ನಮಗೆ ಬೇಡ ಎಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿರುವ ನಾಯಕರ ಬಗ್ಗೆ ರಾಹುಲ್ ಹೇಳಿದರು.
ಐಎನ್‌ಡಿಐಎ ಅಧಿಕಾರಕ್ಕೆ ಬರುತ್ತಿದ್ದಂತೆ ಅಗ್ನಿವೀರ ಯೋಜನೆ ರದ್ದು ಮಾಡುತ್ತೇವೆ, ಜಿಎಸ್‌ಟಿಯನ್ನು ಸರಳಗೊಳಿ ಸುತ್ತೇವೆ. ದೊಡ್ಡ ಉದ್ಯಮಿಗಳಿಗಿಂತಲೂ ಚಿಕ್ಕ ಉದ್ಯಮಗಳಿಗೆ ನೆರವು ನೀಡುತ್ತೇವೆ ಎಂದು ಹೇಳಿದರು. ದಿಲ್ಲಿಯ ಎಲ್ಲ ಏಳೂ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಮತ್ತು ಆಪ್ ಕಾರ್ಯಕರ್ತರು ಕೂಡಿ ಕೆಲಸ ಮಾಡಬೇಕು ಎಂದು ಹೇಳಿದರು.