Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗುತ್ತಿದೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ದುತ್ತೇವೆ. ಅಲ್ಲಿ ಗೃಹ ಸಚಿವರಾದ ಅಮಿತ್ ಶಾ, ಮುಖಂಡರನ್ನು ಭೇಟಿ ಮಾಡಿಸುತ್ತೇವೆ. ಮಂತ್ರಿಗಿರಿ ಕೊಡುತ್ತೇವೆ ಎಂಬ ಆಮಿಷಗಳ ಒಡ್ಡಲಾಗುತ್ತಿದೆ. ಆಪರೇಷನ್ ಕಮಲಕ್ಕೆ ಯಾರು ಯಾರು ಓಡಾಡುತ್ತಿದ್ದಾರೆ. ಅವರ ವಿಡಿಯೋ, ಆಡಿಯೋ ಸಹ ಇದೆ. ಸೂಕ್ತ ಸಮಯದಲ್ಲಿ ಮಂಡ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
Related Articles
Advertisement
ಹೊಸಬರು, ಹಳೆಯ ಶಾಸಕರನ್ನು ಭೇಟಿ ಮಾಡಿದ್ದಾರೆ. ಒಟ್ಟು ನಾಲ್ಕು ಜನ ಶಾಸಕರನ್ನ ಭೇಟಿ ಮಾಡಿದ್ದಾರೆ. ಅವರು ನಮ್ಮ ಗೆಳೆಯರು, ಪ್ರಾಮಾಣಿಕರು ಎಲ್ಲ ನಮಗೆ ಹೇಳಿದ್ದಾರೆ. ಅವರು ಯಾರೂ ಎಂಬುದನ್ನು ಹೇಳುವುದಿಲ್ಲ. ನಾನು, ಚನ್ನಗಿರಿ ಶಾಸಕರು ಪಕ್ಷಕ್ಕೆ ಬದ್ಧರು. ಹಾಗಾಗಿ ನಮ್ಮಂತಹವರ ಭೇಟಿ ಮಾಡುವುದಿಲ್ಲ ಎಂದು ತಿಳಿಸಿದರು.
ಮುಂದೆ ಎರಡೂವರೆ ವರ್ಷ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಅವರು ಮುಖ್ಯಮಂತ್ರಿ ಆಗುವುದು ಗ್ಯಾರಂಟಿ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗಲೇ ಬೇಕು. ಹೈಕಮಾಂಡ್ ಮಟ್ಟದಲ್ಲಿ ಏನಾಗಿದಿಯೋ ಗೊತ್ತಿಲ್ಲ. ಕಾಲ ಬಂದಾಗ ಎಲ್ಲವೂ ನಿರ್ಣಯ ಆಗುತ್ತದೆ ಎಂದು ತಿಳಿಸಿದರು. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸಹ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗು ವರು ಎಂದು ಧ್ವನಿಗೂಡಿಸಿದರು.
ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ಅಽಕಾರದ ದಾಹದಿಂದ ಬಿಜೆಪಿಯವರು ಮತ್ತೆ ಶಾಸಕರ ಖರೀದಿಸುವ ಪರಿಪಾಠ ಮುಂದುವರಿಸಿದ್ದಾರೆ. ನಮ್ಮ ಶಾಸಕರಿಗೆ ೫೦ ಕೋಟಿಯ ಆಮಿಷವೊಡ್ಡಿದ್ದಾರೆ. ಒಳ್ಳೆಯ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಸೆ ಸಹ ತೋರಿಸಿದ್ದಾರೆ. ಇದನ್ನು ಮುಖ್ಯಮಂತ್ರಿಮ ಉಪ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.