Advertisement

‘ಬಿಜೆಪಿಯ ಲಸಿಕೆ’ಯೆಂದು ಟೀಕೆ ಮಾಡಿದವರೇ ಈಗ ಲಸಿಕೆ ಸಿಗುತ್ತಿಲ್ಲವೆನ್ನುತ್ತಿದ್ದಾರೆ: ಕಟೀಲ್

02:27 PM May 14, 2021 | Team Udayavani |

ಮಂಗಳೂರು : ಇದು ರಾಜಕೀಯ ಮಾಡುವ ಕಾಲವಲ್ಲ, ಒಟ್ಟಾಗಿ ಕೆಲಸ ಮಾಡುವ ಸಮಯ. ಇವತ್ತು ಟೀಕೆ ಮಾಡುವವರು ಮೊದಲು ಯೋಚನೆ ಮಾಡಬೇಕು. ದೇಶದಲ್ಲಿ ಕೋವಿಡ್ ಲಸಿಕೆ ಕೊಡಲು ಎರಡು ಘಟಕಗಳು ಕೆಲಸ ಮಾಡುತ್ತಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕಟೀಲ್, ಈಗಾಗಲೇ ಹತ್ತೊಂಬತ್ತು ಕೋಟಿ ಲಸಿಕೆ ಕೊಡುವ ಕೆಲಸ ಆಗಿದೆ. ಆದರೆ ಆರಂಭದಲ್ಲಿ ಬಹಳಷ್ಟು ಜನರು ಇದು ಬಿಜೆಪಿಯ ಲಸಿಕೆ ಎಂದು ಟೀಕೆ ಮಾಡಿದವರೇ ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕ್ತಿದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಶೀರೂರು ಮಠಕ್ಕೆ ನೂತನ ಪೀಠಾಧಿಪತಿಯಾಗಿ ವೇದವರ್ಧನ ತೀರ್ಥರು ನೇಮಕ

ಜನರ ದಾರಿ ತಪ್ಪಿಸುವ ಕೆಲಸ ಮಾಡಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದರು. ಕೋವಿಡ್ ಲಸಿಕೆ ಬಗ್ಗೆ ಅನುಮಾನ ಪಡುವ ಕೆಲಸ ಮಾಡಿ ಜನರ ದಾರಿ ತಪ್ಪಿಸಿದರು. ಅಂದು ನಂಬಿಕೆ ಇರಲಿಲ್ಲ, ಆದರೆ ಇಂದು ಲಸಿಕೆ ಇಲ್ಲ ಅಂತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನನ್ನು ದೂರಿದ್ದಾರೆ.

ಇನ್ನು,  ಜನರ ದಾರಿ ತಪ್ಪಿಸಿದ ಕಾರಣಕ್ಕೆ ಜನರು ಲಸಿಕೆ ತೆಗೆದುಕೊಂಡಿಲ್ಲ. ರಾತ್ರಿ ಹಗಲು ಎಷ್ಟೋ ಜನರು ಕೆಲಸ ಮಾಡುತ್ತಿದ್ದಾರೆ. ಆದರೂ ಸರ್ಕಾರ ಮಾಡುವ ಕೆಲಸಗಳನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ. ರಾಜಕಾರಣ ಮಾಡುವ ಬದಲು ಜನರಿಗೆ ಆತ್ಮವಿಶ್ವಾಸ ತುಂಬಿ. ರಾಜಕಾರಣ ಬಿಟ್ಟು ಕರ್ತವ್ಯ ಮಾಡುವ ಕಾಲಘಟ್ಟ ಮತ್ತು ಅನಿವಾರ್ಯತೆಯಲ್ಲಿ ನಾವಿದ್ದೇವೆ. ಸರ್ಕಾರದದಲ್ಲಿ ವ್ಯತ್ಯಾಸಗಳಾದಾಗ ಟೀಕೆಯ ಬದಲು ಸಲಹೆ ನೀಡಿ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ : ಬಾಲಗಂಗಾಧರನಾಥ ಸ್ವಾಮೀಜಿ ಕಂಚಿನ ಪ್ರತಿಮೆ ಅನಾವರಣ ಮಾಡಿದ ವಿ ಸೋಮಣ್ಣ

Advertisement

Udayavani is now on Telegram. Click here to join our channel and stay updated with the latest news.

Next