Advertisement
ಈ ಸಂಬಂಧ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಜರಾಯಿ ಇಲಾಖೆಗೆ ಸೇರಿಸುವ ತೀರ್ಮಾ ನದಿಂದಾಗಿ ರಾಜ್ಯ ಸರ್ಕಾರ ಅಲ್ಲಿ ಮುಜಾವರ್‌ಗಳನ್ನೇ ಪೂಜೆಗೆ ನೇಮಿಸಿ, ಹಿಂದೂಗಳನ್ನು ವಂಚಿಸಲು ಮುಂದಾಗಿದೆ. ಹೀಗಾಗಿ ಕಾನೂನು ಹೋರಾ ಟದ ಜತೆಗೆ ದತ್ತ ಪೀಠ ಮುಕ್ತಿಯ ಪರ ಸಂಕಲ್ಪ ಹೋರಾ ಟಕ್ಕೂ ಮುಂದಾಗಿದ್ದೇವೆ ಎಂದು ಹೇಳಿ ದ್ದಾರೆ.
Related Articles
Advertisement
ಆದರೆ, ವಿವಾದವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಬಗೆಹರಿಸಲು ಇಷ್ಟವಿಲ್ಲದ ಕಾಂಗ್ರೆಸ್ ಸರ್ಕಾರ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಸಮಿತಿ ರಚಿಸಿ ತನಗೆ ಬೇಕಾದಂತೆ ವರದಿ ಪಡೆದುಕೊಂಡಿದೆ. ಆ ವರದಿಯಂತೆ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಇಲ್ಲಿ ಮುಜಾವರ್ ದೀಪ ಹಚ್ಚಬೇಕು ಮತ್ತು ಪೂಜೆ ಸಲ್ಲಿಸಬೇಕು. ಶಾಖಾದ್ರಿ ನೇತೃತ್ವದಲ್ಲಿ ಇದು ಮುಂದುವರಿಯಬೇಕು ಎಂದು ಸರ್ಕಾರ ಶನಿವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಆ ಮೂಲಕ ದತ್ತಪೀಠದಲ್ಲಿ ಅರ್ಚಕರ ನೇಮಕ ಮತ್ತು ಹಿಂದೂ ಪದ್ಧತಿ ಪ್ರಕಾರ ಪೂಜೆ ನಡೆಯಬೇಕು ಎಂದು ಎರಡು ತಲೆಮಾರುಗಳಿಂದ ಹೋರಾಟ ನಡೆಸುತ್ತಿರುವವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ದತ್ತಪೀಠವನ್ನು ದತ್ತಾತ್ರೆಯ ಸ್ವಾಮಿ ಬಾಬಾ ಬುಡನ್ ದರ್ಗಾ ಎಂದು ಕರೆಯಲು ಕಾಂಗ್ರೆಸ್‌ನವರಿಗೆ ಅಧಿಕಾರ ಕೊಟ್ಟವರು ಯಾರು? ಮುಖ್ಯಮಂತ್ರಿಗಳು ಬೇಕಿದ್ದರೆ ತಮ್ಮ ಹೆಸರನ್ನು ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದಿಟ್ಟುಕೊಳ್ಳಲಿ. ದತ್ತಪೀಠದ ಹೆಸರು ಬದಲಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು, ಒಂದು ವೇಳೆ ಇಂತಹ ಕ್ರಮಕ್ಕೆ ಮುಂದಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆ ಬರಬಹುದು ಇಲ್ಲವೇ ಕ್ರಾಂತಿಯಾಗಲಿದೆ. ಅಂತಹ ಅನಾಹುತವಾದರೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೂಗಳ ಪೂಜನೀಯ ಸ್ಥಾನದಲ್ಲಿ ಮುಜಾವರ್ ಪೂಜೆ ಮಾಡುತ್ತಾರೆ ಎಂದರೆ ಅದನ್ನು ಒಪ್ಪಲು ಸಾಧ್ಯವೇ? ಹಾಗಿದ್ದರೆ ಮಸೀದಿಗಳಲ್ಲಿ ಹಿಂದೂ ಅರ್ಚಕರು ಪೂಜೆ ಮಾಡಲು ಸರ್ಕಾರ ಅವಕಾಶ ನೀಡುತ್ತದೆಯೇ? ಸರ್ಕಾರ ಮಸೀದಿಗಳಲ್ಲಿ ಅರ್ಚಕರನ್ನು ನೇಮಿಸಿ ಪೂಜೆ ಮಾಡಿಸುವುದಾದರೆ ದತ್ತಪೀಠದಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಮುಜಾವರ್ ಮೂಲಕ ಪೂಜೆಗೆ ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ.– ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಪೀಠದಲ್ಲಿ ದೀಪ ಹಚ್ಚಲು, ಪೂಜೆ ಮಾಡಲು ಮುಜಾವರ್‌ಗೆ ಹಿಂದೂಗಳ ಪೂಜಾ ಪದ್ಧತಿ ಗೊತ್ತಿದೆಯೇ? ಅವರು ಮಂತ್ರ ಹೇಳುತ್ತಾರಾ? ಮೂರ್ತಿಪೂಜೆ ಖಂಡಿಸುವ ಅವರು ದತ್ತಪಾದುಕೆ ಪೂಜೆ ಮಾಡುತ್ತಾರಾ? ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಗೋಮುಖವ್ಯಾಘ್ರತನವಲ್ಲವೇ? ಹೊರಗೆ ನಾವು ಹಿಂದೂ ಪರ ಎಂದು ಹೇಳಿಕೊಂಡು ಒಳಗೆ ವಿಷ ತುಂಬಿದ ಹಿಂದೂ ವಿರೋಧಿ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
– ಶೋಭಾ ಕರಂದ್ಲಾಜೆ, ಸಂಸದೆ