Advertisement
ಮೊದಲ ಬಾರಿಗೆ ಶುಕ್ರವಾರ ರಾಜ್ಯದಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ದೇಶದ ಜನರು ಜಾತಿಯ ಆಧಾರದಲ್ಲಿ ಹೊಡೆದಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಬಯಸುತ್ತದೆ. ಮೊದಲ ಪ್ರಧಾನಿ ನೆಹರೂ ಅವರು ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಮೀಸಲು ನೀಡುವುದನ್ನು ವಿರೋಧಿಸಿದ್ದರು. ಆ ಸಮುದಾಯದ ಅಭಿವೃದ್ಧಿ ಕಾಂಗ್ರೆಸ್ಗೆ ಬೇಕಿಲ್ಲ. ಹೀಗಾಗಿ ನಾವೆಲ್ಲರೂ ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ ಎಂದರು.
ಕಾಂಗ್ರೆಸ್, ಉದ್ಧವ್ ಶಿವಸೇನೆ ಬಣ, ಶರದ್ ಪವಾರ್ ಬಣಗಳನ್ನು ಒಳಗೊಂಡಿರುವ ಮಹಾ ವಿಕಾಸ ಅಘಾಡಿಯ ಗಾಡಿಗೆ ಚಕ್ರಗಳೂ ಇಲ್ಲ, ಬ್ರೇಕೂ ಇಲ್ಲ. ಹೀಗಿದ್ದರೂ ಚಾಲಕ (ಸಿಎಂ) ಸ್ಥಾನದಲ್ಲಿ ಕುಳಿತುಕೊಳ್ಳಲು ಅದರ ನಾಯಕರು ಹೋರಾಟ ನಡೆಸುತ್ತಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ. 2 ವರ್ಷ ಹಿಂದೆ ಅವರ ಸರಕಾರ ವೈಖರಿಯನ್ನು ರಾಜ್ಯದ ಜನರು ನೋಡಿದ್ದಾರೆ ಎಂದೂ ಹೇಳಿದರು. ಒಂದು ವಾರದಲ್ಲಿ ಮೋದಿ 9 ರ್ಯಾಲಿ
ಮಹಾರಾಷ್ಟ್ರ ಚುನಾವಣೆಗಾಗಿ ಪ್ರಧಾನಿ ಮೋದಿ ಶುಕ್ರವಾರದಿಂದ 1 ವಾರ ಕಾಲ 9 ರ್ಯಾಲಿ ನಡೆಸಲಿದ್ದಾರೆ. ಈ ಪೈಕಿ 2 ಶುಕ್ರವಾರ ಮುಕ್ತಾಯವಾಗಿದೆ. ನ.9ರಂದು ಅಕೋಲ, ನಾಂದೇಡ್ನಲ್ಲಿ, ನ.12ರಂದು ಚಂದ್ರಾಪುರ ಜಿಲ್ಲೆಯ ಚಿಮೂರ್, ಸೋಲಾಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಅದೇ ದಿನ ಪುಣೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ನ.14ರಂದು ಛತ್ರಪತಿ ಸಂಭಾಜಿನಗರ್, ರಾಯ್ಗಢ, ಮುಂಬಯಿಯಲ್ಲಿ ಪ್ರಚಾರ ನಡೆಸಲಿದ್ದಾರೆ.