Advertisement

ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ಕೊಡುಗೆ ಅಪಾರ

04:49 PM Mar 26, 2017 | Team Udayavani |

ಚಾಮರಾಜನಗರ: ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸಮುದಾ ಯದ ಜನರು ಬೆಂಬಲಿಸಬೇಕು. ಗುಂಡ್ಲುಪೇಟೆ ಕ್ಷೇತ್ರದಲ್ಲಿ 28 ಸಾವಿರ ಪರಿಶಿಷ್ಟ ಪಂಗಡದ ಮತದಾರರಿದ್ದು,  ಹೆಚ್ಚು ಪಾಲು ಬಿಜೆಪಿಯನ್ನು  ಬೆಂಬಲಿಸಲಿಸುವ ಮೂಲಕ ಯಡಿಯೂರಪ್ಪ ಹಾಗೂ ನಮ್ಮ ನಾಯಕ ಶ್ರೀರಾಮುಲು ಕೈ ಬಲಪಡಿಸಬೇಕು ಎಂದು  ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾ ರಾಜ್ಯಾಧ್ಯಕ್ಷ ನರಸಿಂ ಹನಾಯಕ(ರಾಜೂಗೌಡ) ತಿಳಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು,  ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟ ವರ್ಗಗಳ ಬಗ್ಗೆ ಹೆಚ್ಚಿನ ಅಸಕ್ತಿ ವಹಿಸುತ್ತಿಲ್ಲ. ಸಿದ್ದ ರಾಮಯ್ಯ ಮಂತ್ರಿ ಮಂಡಲದಲ್ಲಿ ನಾಯಕ  ಸಮುದಾಯಕ್ಕೆ ಆದ್ಯತೆ ನೀಡಿಲ್ಲ. ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ನೀಡಿಲ್ಲ. ಕೇವಲ ಒಬ್ಬರಿಗೆ ಮಾತ್ರನಾಮ್‌ಕವಾಸ್ತೆಗೆ  ಕಿಮ್ಮತ್ತು ಇಲ್ಲದ ಖಾತೆಗಳನ್ನು ನೀಡಿದ್ದಾರೆ. ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

ಬಿಎಸ್‌ವೈರಿಂದ ನಾಯಕ ಸಮುದಾಯಕ್ಕೆ ವಿಶೇಷ ಕೊಡುಗೆ: ಬಿಜೆಪಿ ಸರ್ಕಾರದ ಅವಧಿ ಯಲ್ಲಿ ಜನಾಂಗಕ್ಕೆ ವಿಶೇಷ ಕೊಡುಗೆಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿದೆ. ಬಿಜೆಪಿಸರ್ಕಾರದಲ್ಲಿ  ನಾಲ್ವರು ಎಸ್‌ಟಿ ಮಂತ್ರಿಗಳಿದ್ದರು. ನಮ್ಮ ಜನಾಂಗದ ನಾಯಕ ಶ್ರೀರಾಮುಲು ಅವ ರಿಗೆ ಮಹತ್ವದ ಖಾತೆಯನ್ನು ನೀಡುವ ಜೊತೆಗೆ ಬಾಲಚಂದ್ರ ಜಾರಕಿಹೊಳಿ, ಶಿವಪ್ಪನಾಯಕ್‌ ಹಾಗೂ ತಮಗೆ ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನ ನೀಡಿದ್ದರು.

ಉತ್ತಮ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವ ಜೊತೆಗೆ ರಜಾವನ್ನು ಘೋಷಣೆ ಮಾಡಲಾಯಿತು. ವಾಲ್ಮೀಕಿ ಭವನಗಳ ನಿರ್ಮಾಣ ಹಾಗೂ ಸಮು ದಾಯದ ಆಧಾರಿತ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಹೀಗಾಗಿ ನಂಜನಗೂಡು ಹಾಗೂ ಗುಂಡ್ಲು ಪೇಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು,  ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕ್ಷೇತ್ರದ ಮತದಾರರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ನಾಯಕ ಸಮುದಾಯದ ಬಂಧುಗಳು ಸಹ  ತಮ್ಮ ಮತವನ್ನು ಬಿಜೆಪಿಗೆ ಹಾಕಿ ಗೆಲ್ಲಿಸಬೇಕು ಎಂದು  ಮನವಿ ಮಾಡಿ ದ ಅವರು, ಸಿದ್ಧರಾಮಯ್ಯ ನೇತೃತ್ವದ ದುರಾ ಡಳಿತಕ್ಕೆ  ನಾಯಕ ಸಮುದಾಯವರು ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

Advertisement

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ  ಎಂ.ಅಪ್ಪಣ್ಣನಾಯಕ ಮಾತನಾಡಿ, ಈ ಭಾಗದಲ್ಲಿರುವ ತಳವಾರ, ಪರಿವಾರ ಪದಗಳು ನಾಯಕ ಜನಾಂಗದ ಪರ್ಯಾಯವಾಗಿದ್ದು, ಇದನ್ನು ಎಸ್ಟಿ ಪಟ್ಟಿಗೆಸೇರ್ಪಡೆ ಮಾಡಲು  ಕೇಂದ್ರದಲ್ಲಿ ಅನುಮೋ ದನೆಯಾಗಿದೆ. ಕೇಂದ್ರ ಗೆಜೆಟ್‌ನಲ್ಲಿ   ಪ್ರಕಟಗೊ ಳ್ಳುವುದು ಮಾತ್ರ ಬಾಕಿ ಇದೆ. ಹೀಗಾಗಿ  ಕೇಂದ್ರ ಸರ್ಕಾರ  ಆಡಳಿತ ವೈಖರಿಯನ್ನು ನೋಡಿ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

 ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ  ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ, ರಾಜ್ಯಎಸ್‌ಟಿ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾ ಯಕ, ಎಸ್ಟಿ ಜಿಲ್ಲಾಧ್ಯಕ್ಷ ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next