ಬೆಂಗಳೂರು : ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಬಿಜೆಪಿಗೆ ಭಯ ಶುರುವಾಗಿದ್ದು,ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.ಈ ಕಾರ್ಯಕ್ರಮ ಮಾಡಿದರೆ ತಪ್ಪೇನಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿಕೆ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಸಮಿತಿಯಿಂದ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ, ಕಾಂಗ್ರೆಸ್ ಕಾರ್ಯಕ್ರಮ. ಇಲ್ಲಿ ಯಾರೂ ವ್ಯಕ್ತಿ ಪೂಜೆ ಮಾಡುತ್ತಿಲ್ಲ. ಇದು ಸಿದ್ದರಾಮಯ್ಯ ಹುಟ್ಟುಹಬ್ಬ.ಇಲ್ಲಿ ಮದುಮಗ ಅಂದರೆ ಸಿದ್ದರಾಮಯ್ಯ.ಹಾಗಾಗಿ ಕಾರ್ಯಕ್ರಮದಲ್ಲಿ ಮುಖ್ಯವಾಗಿರುತ್ತಾರೆ. ಡಿ.ಕೆ ಶಿವಕುಮಾರ್ ಗೆ 75 ವರ್ಷವಾದಾಗ ಆಚರಿಸುತ್ತೇವೆ, ನನಗೂ 75 ವರ್ಷವಾದಾಗ ಕಾರ್ಯಕ್ರಮ ಮಾಡೋಣ. ಈಗ ಅರವತ್ತು ವರ್ಷ ತುಂಬಿದೆ.ಷಷ್ಠಿಪೂರ್ತಿ ಮಾಡಿಕೊಳ್ಳಲಿ, ನಾವೆಲ್ಲ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ.ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಬಿಜೆಪಿ ನಾಯಕರ ಚಿಂತನ ಮಂಥನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಪ್ರವಾಹದ ಬಗ್ಗೆ ಚಿಂತನ ಮಂಥನ ಮಾಡಬೇಕಿತ್ತು. ಅದು ಬಿಟ್ಟು ಏನು ಮಾಡಲು ಹೊರಟಿದ್ದಾರೆ. ಅವರಿಗೆ ಈಗಾಗಲೇ ಗೊತ್ತಾಗಿದೆ. ಆಂತರಿಕ ಸಮೀಕ್ಷೆಯಲ್ಲಿ ಎಷ್ಟು ಸ್ಥಾನ ಬರುತ್ತದೆ ಎಂದು. ಹಾಗಾಗಿಯೇ ಚಿಂತನ ಮಂಥನ ಮಾಡುತ್ತಿದ್ದಾರೆ. ಬಿಜೆಪಿಗೆ ಜನರ ಸಮಸ್ಯೆ ಬೇಕಿಲ್ಲ. ಸೋಲುವ ಬಗ್ಗೆ ಆಂತರಿಕ ಸಮೀಕ್ಷಾ ವರದಿ ಬಂದಿದೆ. ಆದರಿಂದ ಗೆಲ್ಲವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ, ಈಗ ಸಭೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಪರಿಹಾರ ಸಿಕ್ಕಿಲ್ಲ. ಪರಿಹಾರ ಕಣ್ಣೋರೆಸುವ ತಂತ್ರ ಆಗಬಾರದು ಎಂದರು.
ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂಬ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ತಜ್ಞ ನ್ಯೂಟ್ರಿಷಿಯನ್ಸ್ ಇದ್ದಾರೆ, ಸರ್ಕಾರ ಅವರ ಅಭಿಪ್ರಾಯ ಪಡೆಯಬೇಕು. ನಾವು ಸಣ್ಣವರಿದ್ದಾಗಿನಿಂದ ಹಾಲು ಕುಡಿದು ಬೆಳದಿದ್ದೇವೆ. ಈಗ ಹಾಲು ಮೊಟ್ಟೆ ಕೊಡಬಾರದು ಅನ್ನುವುದು ಅವೈಜ್ಞಾನಿಕ. ಕೆಲವೊಂದು ಅಜೆಂಡಾ ಜಾರಿಗೆ ಸರ್ಕಾರ ಹೊರಟಿದೆ. ಸರ್ಕಾರ ಮನಸ್ಸಿಗೆ ಬಂದ ಹಾಗೆ ವರದಿ ಜಾರಿ ಮಾಡಬಾರದು. ಇದು ಇನ್ನೊಂದು ಚಕ್ರತೀರ್ಥ ಕಥೆಯಾಗುತ್ತದೆ ಎಂದರು.