Advertisement
ಆರಂಭದಲ್ಲಿ ಎಂಟು ಜನರು ಈ ರೀತಿ ಉದ್ಯೋಗ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬಳಿಕ ಶಿಕ್ಷಣ ಇಲಾಖೆಯಿಂದ 12 ಜನರು ಎಂಬ ಮಾಹಿತಿ ಹೊರಬಿತ್ತು. ಈಗ ಸಿಐಡಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅಕ್ರಮವಾಗಿ ಶಿಕ್ಷಕರ ಹುದ್ದೆ ಗಿಟ್ಟಿಸಿದವರ ಸಂಖ್ಯೆ 80 ಕ್ಕೂ ಹೆಚ್ಚು ಎಂಬ ಮಾಹಿತಿ ಲಭ್ಯವಾಗುತ್ತಿದೆ.
Related Articles
Advertisement
ಮುಖ್ಯ ಪಟ್ಟಿಯನ್ನ ಬಿಟ್ಟು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಅಕ್ರಮವಾಗಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು.
ಇದನ್ನೂ ಓದಿ:ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು
ಸಿದ್ದರಾಮಯ್ಯ ಸರಕಾರದ ಕೊನೆ ಅವಧಿಯಲ್ಲಿ ಅಂದರೆ 2017-18 ರಲ್ಲಿ ನೇಮಕ ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಆಗ ಅಕ್ರಮವಾಗಿ ನೇಮಕವಾದ ಶಿಕ್ಷಕರಿಗೆ ಆದೇಶ ಪತ್ರ ನೀಡಲಾಗಿತ್ತು. ಮುಖ್ಯ ಪಟ್ಟಿಯಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆಯಾಗಿದ್ದು ಒಬ್ಬರ ಹೆಸರು. ಆದರೆ ಹೆಚ್ಚುವರಿ ಪಟ್ಟಿಯಲ್ಲಿ ನೇಮಕವಾಗಿದ್ದು ಇನ್ನೊಬ್ಬರ ಹೆಸರು ಇದ್ದದ್ದು ಅನುಮಾನಕ್ಕೆ ಕಾರಣವಾಗಿತ್ತು. ನೇಮಕಾತಿಗೆ ನಿಗದಿ ಮಾಡಿದ್ದ ಕಟಾಫ್ ಅಂಕವನ್ನೇ ಕಡಿತ ಮಾಡಿ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು. ಹೆಚ್ಚು ಅಂಕ ಬಂದಿರುವ ಅಭ್ಯರ್ಥಿ ಬದಲಾಗಿ ಕಡಿಮೆ ಅಂಕ ಬಂದಿರುವ ಅಭ್ಯರ್ಥಿಗಳ ಹೆಸರು ಮೆರಿಟ್ ಲಿಸ್ಟ್ ನಲ್ಲಿ ಸೇರಿಸಿ ಆಯ್ಕೆ ಮಾಡಲಾಗಿತ್ತು ಎಂಬುದು ಪ್ರಧಾನ ಆರೋಪವಾಗಿದ್ದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲೇ ಈ ವಿಚಾರವನ್ನು ಅನಾವರಣಗೊಳಿಸಿದ್ದರು.
ಪರೀಕ್ಷೆ ಬರೆಯದೇ ಹೋದ ಅಭ್ಯರ್ಥಿಗೂ ಹೆಚ್ಚುವರಿ ಪಟ್ಟಿಯಲ್ಲಿ ಕೆಲಸ ನೀಡಿದ್ದ ಅಂದಿನ ಸರ್ಕಾರ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ ಎಂದು ಬಿಜೆಪಿ ಈಗ ಆರೋಪಿಸಿದೆ.