ಹೊಸದಿಲ್ಲಿ : 2018ರ ಮಧ್ಯ ಪ್ರದೇಶ, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಿಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಶುಕ್ರವಾರ ಪ್ರಕಟಿಸಿದೆ.
230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭಗೆ 177 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ತೆಲಂಗಾಣ ಮತ್ತು ಮಿಜೋರಾಂ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅನುಕ್ರಮವಾಗಿ 28 ಮತ್ತು 24 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಹಾಲಿ ಕ್ಷೇತ್ರ ಬುದ್ನಿ ಯಿಂದಲೇ ಸ್ಪರ್ಧಿಸಲಿದ್ದಾರೆ. ಸಚಿವರಾಗಿರುವ ನರೋತ್ತಮ ಮಿಶ್ರಾ ಮತ್ತು ಯಶೋಧರ ರಾಜೆ ಸಿಂಧಿಯಾ ಅವರು ಅನುಕ್ರಮವಾಗಿ ದಾತಿಯಾ ಮತ್ತು ಶಿವಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಮಧ್ಯ ಪ್ರದೇಶ ಮತ್ತು 40 ಸದಸ್ಯಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 28ರಂದು ಚುನಾವಣೆ ನಡೆಯಲಿದೆ. 119 ಸದನ ಬಲದ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ. ಈ ಎಲ್ಲ ರಾಜ್ಯಗಳ ಮತ ಎಣಿಕೆಯು ಡಿ. 11ರಂದು ನಡೆಯಲಿದೆ.