Advertisement

“ಲೋಕ’ಯುದ್ಧಕ್ಕೆ ಬಿಜೆಪಿ ಸಿದ್ಧ

06:00 AM Dec 27, 2018 | |

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಬಿಜೆಪಿ ಸಂಘಟನಾತ್ಮಕ ಸಿದ್ಧತೆಗಳನ್ನು ಶುರು ಮಾಡಿದೆ. 17 ರಾಜ್ಯಗಳಿಗೆ ವಿವಿಧ ನಾಯಕರನ್ನು ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಿಸಿ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಬುಧವಾರ ಆದೇಶ ನೀಡಿದ್ದಾರೆ. 

Advertisement

ಕರ್ನಾಟಕದ ಮಾಜಿ ಸಚಿವ, ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವ ರನ್ನು ತೆಲಂಗಾಣ ರಾಜ್ಯದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಅಧಿ ಕಾರ ಕಳೆದುಕೊಂಡ ರಾಜಸ್ಥಾನಕ್ಕೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ತಾವರ್‌ಚಂದ್ರ ಗೆಹೊÉàಟ್‌ರನ್ನು ಉತ್ತರಾಖಂಡಕ್ಕೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. 

80 ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶಕ್ಕೆ ನರೋತ್ತಮ್‌ ಮಿಶ್ರಾರನ್ನು ಉಸ್ತು ವಾರಿ ಯನ್ನಾಗಿ ನೇಮಿಸಲಾಗಿದೆ. ದುಷ್ಯಂತ್‌ ಗೌತಮ್‌, ಗೋವರ್ಧನ್‌ ಝಡಾಪಿಯಾ ಸಹ ಉಸ್ತುವರಿಗಳಾಗಲಿದ್ದಾರೆ. ಮಧ್ಯಪ್ರದೇ ಶಕ್ಕೆ ಉತ್ತರ ಪ್ರದೇಶ ಸಚಿವ ಸ್ವತಂತ್ರ ದೇವ್‌ ಸಿಂಗ್‌ ಮತ್ತು ದೆಹಲಿ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಸತೀಶ್‌ ಉಪಾಧ್ಯಾಯರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್‌, ಅನಿಲ್‌ ಜೈನ್‌ರನ್ನು ಕ್ರಮವಾಗಿ ಬಿಹಾರ ಮತ್ತು ಛತ್ತೀಸ್‌ಗಡಕ್ಕೆ ನೇಮಿಸಲಾಗಿದೆ. ವಕ್ತಾರ ನಳಿನ್‌ ಕೋಹ್ಲಿಗೆ  ನಾಗಾಲ್ಯಾಂಡ್‌ ಮತ್ತು ಮಣಿಪುರದ ಹೊಣೆ ನೀಡಲಾಗಿದೆ.

ಎಲ್‌ಡಿಎಫ್ ವಿಸ್ತರಣೆ: ಕೇರಳದಲ್ಲಿನ ಆಡ ಳಿತಾರೂಢ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎಲ್‌ಡಿಎಫ್)ಕ್ಕೆ ಮಾಜಿ ಸಚಿವ ಎಂ.ಪಿ. ವೀರೇಂದ್ರ ಕುಮಾರ್‌ ನೇತೃತ್ವದ ಲೋಕ ತಾಂತ್ರಿಕ ಜನತಾ ದಳ,  ಕೆ.ಬಾಲಕೃಷ್ಣ ಪಿಳ್ಳೆ ನೇತೃತ್ವದ ಕೇರಳ ಕಾಂಗ್ರೆಸ್‌ (ಬಿ), ಇಂಡಿ ಯನ್‌ ನ್ಯಾಷನಲ್‌ ಲೀಗ್‌ ಮತ್ತು ಡೆಮಾ ಕ್ರಾಟಿಕ್‌ ಕೇರಳ ಕಾಂಗ್ರೆಸ್‌ ಪಕ್ಷಗಳನ್ನು ಹೊಸ ತಾಗಿ ಸೇರ್ಪಡೆ ಮಾಡಲಾಗಿದೆ. ಸಿಪಿಎಂ, ಸಿಪಿಐ, ಜೆಡಿಎಸ್‌, ಎನ್‌ಸಿಪಿ, ಕೇರಳ ಕಾಂಗ್ರೆಸ್‌ (ಸಕಾರಿಯಾ ಥಾಮಸ್‌), ಕಾಂಗ್ರೆಸ್‌ (ಸೆಕ್ಯುಲರ್‌) ಈಗ ಎಲ್‌ಡಿಎಫ್ನಲ್ಲಿ ರುವ ಪಕ್ಷಗಳು.

ಅಧಿಕಾರಕ್ಕೋಸ್ಕರ ಮೈತ್ರಿ: ಕೆಲವರಿಗೆ ಅಧಿ ಕಾರ ಎನ್ನುವುದು ಆಮ್ಲಜನಕವಿದ್ದಂತೆ ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮಾಡಿದ್ದ ಟೀಕೆಯನ್ನು ಶಿವಸೇನೆ “ನರೇಂದ್ರ ಮೋದಿ ಯವರಿಗೇ ಇದು ಅನ್ವಯಿಸುತ್ತದೆ’ ಎಂದು ಟೀಕಿಸಿದೆ. 2014ರಲ್ಲಿ ಅಧಿಕಾರ ಪಡೆಯ ಲೋಸುಗವೇ ಶಿವಸೇನೆ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತು ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷದ ಮುಖವಾಣಿ “ಸಾಮ್ನಾ’ದಲ್ಲಿ ಕಟಕಿ ಯಾಡಲಾಗಿದೆ.

Advertisement

ರಾಹುಲ್‌ ಒಪ್ಪುವವರಿಲ್ಲ: ಪ್ರತಿಪಕ್ಷಗಳಲ್ಲಿ ಕಾಂಗ್ರೆಸ್‌ ಏಕಾಂಗಿಯಾಗುತ್ತಿದೆ ಮತ್ತು ರಾಹುಲ್‌ ಗಾಂಧಿಯವರ ನಾಯಕತ್ವ ಒಪ್ಪುವವರಿಲ್ಲ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌.  ನರಸಿಂಹ ರಾವ್‌ ಹೇಳಿದ್ದಾರೆ. 2017ರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಜತೆ ಯಾಗಿ ವಿಧಾನಸಭೆ ಚುನಾವಣೆ ವೇಳೆ ಸ್ಪರ್ಧೆಗೆ ಇಳಿದದ್ದು ಯಾವುದೇ ಲಾಭವಾ ಗಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲು ಎಸ್‌ಪಿ ಮುಂದಾಗುತ್ತಿಲ್ಲ ಎಂದಿದ್ದಾರೆ. 

ಆಗುತ್ತಾ ಫೆಡರಲ್‌ ಫ್ರಂಟ್‌?
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬುಧ ವಾರ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ನೀಡಬೇಕಾಗಿರುವ ಅನುದಾನದ ಪಟ್ಟಿ ನೀಡಿದ್ದಾರೆ. 

ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾಗಿರುವ ಫೆಡರಲ್‌ ಫ್ರಂಟ್‌ ರಚಿಸುವ ಹುಮ್ಮಸ್ಸಿನಲ್ಲಿರುವ ರಾವ್‌ ಇತರ ಪಕ್ಷಗಳ ನಾಯಕ ರನ್ನು ಭೇಟಿಯಾಗುವ ಮೊದಲು ಪ್ರಧಾನಿ ಭೇಟಿ ಮಾಡಿದ್ದು ಎಸ್‌ಪಿ, ಬಿಎಸ್‌ಪಿ ನಾಯಕರಿಗೆ ಸರಿಹೋದಂತೆ ಇಲ್ಲ. ಡಿ.28ರ ವರೆಗೆ ನವದೆಹಲಿಯಲ್ಲಿರುವ ರಾವ್‌ ಅವರು ಬಿಎಸ್‌ಪಿ ನಾಯಕಿ ಮಾಯಾವತಿ, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌, ಮುಖ್ಯ ಚುನಾ ವಣಾ ಆಯುಕ್ತ ಸುನಿಲ್‌ ಅರೋರಾರನ್ನು ಭೇಟಿಯಾಗಲಿದ್ದಾರೆ. ರಾವ್‌ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖೀಲೇಶ್‌ ಯಾದವ್‌ ಜ.6ರಂದು ಹೈದರಾಬಾದ್‌ನಲ್ಲಿ ಭೇಟಿ ಯಾಗುವುದಾಗಿ ಹೇಳಿದ್ದಾರೆ. ಮಾಯಾವತಿ ಇನ್ನಷ್ಟೇ ಭೇಟಿಯ ಬಗ್ಗೆ ಸಮಯ ನೀಡಬೇಕಷ್ಟೇ. ಇತ್ತೀಚೆಗಷ್ಟೇ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಕೆಸಿಆರ್‌ ಮಾತುಕತೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next