Advertisement

35A ವಿಧಿ ಚರ್ಚೆಗೆ ಸಿದ್ಧ: BJP, ಜಮ್ಮು ಕಾಶ್ಮೀರ 2 ದಿನ ಬಂದ್‌ಗೆ ಕರೆ

07:17 PM Aug 04, 2018 | udayavani editorial |

ಜಮ್ಮು : ಜಮ್ಮು ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುವ ಭಾರತ ಸಂವಿಧಾನದ 35A ವಿಧಿಯ ಬಗ್ಗೆ ಚರ್ಚೆ ನಡೆಸಲು ತಾನು ಸಿದ್ಧನಿದ್ದೇನೆ ಎಂದು ಬಿಜೆಪಿ ಇಂದು ಶನಿವಾರ ಹೇಳಿಕೊಂಡಿದೆ. 

Advertisement

ಈ ಅತಿಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ದಿನೇ ದಿನೇ ಏರುತ್ತಿದೆ. 

ಸಂವಿಧಾನದ 35A ವಿಧಿಯಡಿಯ ಅವಕಾಶಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ಸುಪ್ರೀಂ ಕೋರ್ಟ್‌ ತೀರ್ಪು ಇದೇ ಆಗಸ್ಟ್‌ 6ರ ಸೋಮವಾರ ಹೊರಬೀಳಲಿದ್ದು ಅದಕ್ಕೆ ಎರಡು ದಿನ ಮುನ್ನ ಬಿಜೆಪಿ ಈ ಹೇಳಿಕೆ ನೀಡಿದೆ. 

ಆರ್‌ಎಸ್‌ಎಸ್‌ ಜತೆ ನಂಟು ಹೊಂದಿರುವ “ವೀ ದ ಸಿಟಿಜನ್ಸ್‌’ ಎಂಬ ಎನ್‌ಜಿಓ ಕೂಡ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಸಂವಿಧಾನದ 35ಎ ವಿಧಿಯನ್ನು ಕಿತ್ತು ಹಾಕಬೇಕೆಂದು ಆಗ್ರಹಿಸಿದೆ. ಸುಪ್ರೀಂ ಕೋರ್ಟ್‌ ಆ.6ರಂದು ತೀರ್ಪು ನೀಡಲು ಕೈಗೆತ್ತಿಕೊಳ್ಳುವ ಅರ್ಜಿಗಳಲ್ಲಿ ಇದು ಕೂಡ ಸೇರಿದೆ. 

Advertisement

Udayavani is now on Telegram. Click here to join our channel and stay updated with the latest news.

Next