Advertisement

ದೆಹಲಿ ದಾಂಧಲೆ ಖಂಡಿಸಿ ಬಿಜೆಪಿ ಪ್ರತಿಭಟನೆ

06:18 PM Jan 29, 2021 | Nagendra Trasi |

ಮುದ್ದೇಬಿಹಾಳ: ದೆಹಲಿಯ ಕೆಂಪುಕೋಟೆ ಬಳಿ ಗಣರಾಜ್ಯೋತ್ಸವದಂದು ರೈತರ ಹೆಸರಲ್ಲಿ ಕೆಲ ದೇಶದ್ರೋಹಿಗಳು ನಡೆಸಿದ ಪುಂಡಾಟಿಕೆ, ಪೊಲೀಸರ ಮೇಲಿನ ಹಲ್ಲೆ, ರಾಷ್ಟ್ರಧ್ವಜಕ್ಕೆ ಅಪಮಾನ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

Advertisement

ಬಿಜೆಪಿ ಹಿರಿಯ ಧುರೀಣ ಪ್ರಭು ಕಡಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಗಿರೀಶಗೌಡ ಪಾಟೀಲ ನಾಲತವಾಡ ಮಾತನಾಡಿ, ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮಸೂದೆಗಳು ರೈತರ ಹಿತ ಹೊಂದಿವೆ. ಬಿಜೆಪಿ ಸರ್ಕಾರದ  ಜನಪ್ರಿಯತೆ ಸಹಿಸದ ವಿರೋಧ ಪಕ್ಷದವರು ರೈತರೊಂದಿಗೆ ಸೇರಿಕೊಂಡು ಹಿಂಸಾಚಾರ ನಡೆಸಿದ್ದಾರೆ. ಇದು ರೈತ ಹೋರಾಟಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಪುಂಡಾಟಿಕೆ ನಡೆಸಿದವರನ್ನು ಬಂಧಿಸಿ ದೇಶದ ಸಾರ್ವಭೌಮತ್ವ ಕಾಪಾಡಬೇಕು ಎಂದರು.

ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಮಹಾಂತೇಶ ಕಾಶಿನಕುಂಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪುರ, ತಾಲೂಕು ಬಿಜೆಪಿ ಕಾರ್ಯದರ್ಶಿ ಕಾಶಿನಾಥ ಅರಳಿಚಂಡಿ, ಬಿ.ಪಿ. ಕುಲಕರ್ಣಿ, ರವೀಂದ್ರ ಬಿರಾದಾರ, ರುದ್ರಪ್ಪ ಬಿಜೂರ ಬಿದರಕುಂದಿ, ಮಹಾಂತೇಶ ಗಂಜ್ಯಾಳ ಕಾಳಗಿ, ಡಾ| ಪರಶುರಾಮ ಪವಾರ, ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್‌, ಸಂಗಮ್ಮ ದೇವರಳ್ಳಿ, ಅಶೋಕ ವನಹಳ್ಳಿ, ಬಸಯ್ಯ ನಂದಿಕೇಶ್ವರಮಠ, ಸರಸ್ವತಿ ಪೀರಾಪುರ, ಬಸಮ್ಮ
ಸಿದರಡ್ಡಿ, ಪುನೀತ್‌ ಹಿಪ್ಪರಗಿ, ರಾಜು ಬಳ್ಳೊಳ್ಳಿ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಹಣಮಂತ ನಲವಡೆ, ವೆಂಕನಗೌಡ ಪಾಟೀಲ, ಸಂಗಮೇಶ
ಹುಂಡೇಕಾರ, ಡಾ| ಎಂ.ಎನ್‌. ಪಾಟೀಲ, ಬಾಪುಗೌಡ ಅಮಾತಿಗೌಡರ, ಸಂಗಮೇಶ ಮೇಟಿ, ಶಿವಾನಂದ ಕೋರಿ, ಚನಬಸಪ್ಪ ತಾಳಿಕೋಟೆ, ನೀಲಮ್ಮ ಚಲವಾದಿ, ಶಿವಮ್ಮ ಬಿರಾದಾರ, ಕಾಶಿಬಾಯಿ ಕೂಳ್ಳಿ, ನಿರ್ಮಲಾ ಪುರಾಣಿಕಮಠ, ನರಸಮ್ಮ ಗುಬಚಿ, ಮಣಿಕಂಠ ಅಮರೋದಗಿ, ರಾಜಶೇಖರ ಹೂಳಿ, ಸಂತೋಷ ಬಾದರಬಂಡಿ, ವಿಜಯ ಬಡಿಗೇರ, ಅಶೋಕ ಚಿನಿವಾರ, ಚಂದ್ರು ಹಂಪನಗೌಡರ, ಮಲ್ಲಿಕಾರ್ಜುನ ಹಂದಿಗನೂರ, ಗುರುನಾಥಗೌಡ ಕಡಕೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next