Advertisement
ಪಕ್ಷದ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಏನೆಲ್ಲಾ ಅನಾಹುತ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ದಿಟ್ಟ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈಚೆಗೆ ಬಂಟ್ವಾಳದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ಈ ಕ್ಷಣಕ್ಕೂ ಯಾರೊಬ್ಬ ಆರೋಪಿತರನ್ನು ಬಂಧಿಸದೇ ಇರುವುದು ಕಾಂಗ್ರೆಸ್ ಸರ್ಕಾರದ ರಾಜಕೀಯ ಉದ್ದೇಶ ಸ್ಪಷ್ಟವಾಗುತ್ತಿದೆ. ಮತ ಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ಮಾಡುವುದರಲ್ಲಿ ನಿರತವಾಗಿರುವ ರಾಜ್ಯ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳರ
ಹತ್ಯೆ ಪ್ರಕರಣವನ್ನು ಗಂಭೀರವಾಗಿ ನಡೆಸುತ್ತದೆ ಎಂಬ ವಿಶ್ವಾಸವೇ ಇಲ್ಲ. ಹಾಗಾಗಿ ಶರತ್ ಮಡಿವಾಳ ಹತ್ಯೆರ ಪ್ರಕರಣವನ್ನ
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಐ)ಗೆ ವಹಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳೇ ಸಾವನ್ನಪ್ಪಿರುವುದು ದುರಾಡಳಿತದ ಪ್ರತೀಕ. ಡಿ.ಕೆ. ರವಿ, ಎಂ.ಕೆ. ಗಣಪತಿ ಪ್ರಕರಣ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿನ ಭ್ರಷ್ಟಾಚಾರ,
ಅವ್ಯವಹಾರ ಬಯಲಿಗೆಳೆದ ಕಾರಣಕ್ಕೆ ಕಾರಾಗೃಹ ಇಲಾಖೆ ಡಿಐಜಿ ಡಿ. ರೂಪಾ ಅವರ ವರ್ಗಾವಣೆ ಮಾಡಲಾಗಿದೆ. ಅನುಕೂಲಕ್ಕೆ ತಕ್ಕಂತೆ ನಡೆಯದ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಸಹಿಸುವುದಿಲ್ಲ ಎನ್ನುವುದಕ್ಕೆ ರೂಪಾ ವರ್ಗಾವಣೆಯೇ ಜೀವಂತ ಸಾಕ್ಷಿ.
ಕೂಡಲೇ ರೂಪಾ ವರ್ಗಾವಣೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
Related Articles
ರಮೇಶ್‌ನಾಯ್ಕ, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಧನುಶ್‌ರೆಡ್ಡಿ, ನರೇಶ್, ಸರೋಜಾ ದಿಕೀತ್, ದೇವಿರಮ್ಮ ರಾಮಚಂದ್ರನಾಯ್ಕ, ದೇವನಗರಿ ಎಂ. ಮನು, ವೀರೇಶ್ ಪೈಲ್ವಾನ್, ಬಾಲರಾಜ್
ಎರೇಸೀಮೆ ಇತರರು ಇದ್ದರು.
Advertisement