Advertisement
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸಚಿವ ಹೆಚ್. ಆಂಜನೇಯ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ಬೋರ್‌ವೆಲ್ ಕೊರೆಸುವಾಗ ಸರ್ಕಾರದ ನಿಮಯ ಧಿಕ್ಕರಿಸಲಾಗಿದೆ. ಒಂದೊಂದು ಮನೆಗೆ ಮೂರ್‍ನಾಲ್ಕು ಬೋರ್ ಮಂಜೂರುಮಾಡಲಾಗಿದೆ. ನಾಲ್ಕೂವರೆ ವರ್ಷಗಳ ಕಾಲ ಯಾವುದೆ ಅಭಿವೃದ್ಧಿ ಬಗ್ಗೆ ತಲೆಕಡಿಸಿಕೊಳ್ಳದ ಸಚಿವರು ಚುನಾವಣೆ ಸಮಯ ಹತ್ತಿರ ಬರುತ್ತಿದ್ದಂತೆ ಹೊಳಲ್ಕೆರೆ ಕ್ಷೇತ್ರದ ಜನರನ್ನು ಸಮಾಧಾನಪಡಿಸುವುದಕ್ಕಾಗಿ ಕೊಳವೆ ಬಾವಿ ನೀಡುತ್ತಿದ್ದಾರೆ. ಬೋರ್‌ವೆಲ್
ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಎಚ್.ಆಂಜನೇಯ ಅವರು ಮೌನವಾಗಿರುವುದನ್ನು ನೋಡಿದರೆ ಭ್ರಷ್ಟಾಚಾರ ಸಾಬೀತಾದಂತಾಗಿದೆ. ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್‌ನ ಬಡ ಮಕ್ಕಳಿಗೆ ನೀಡುವ ಹಾಸಿ ದಿಂಬಿನಲ್ಲಿಯೂ ಹಣ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ನಾಲ್ಕೂವರೆ ವರ್ಷಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಒಂದು ಲಕ್ಷದ ಹತ್ತೂಂಬತ್ತು ಸಾವಿರ ಕೋಟಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಇಷ್ಟೊಂದು ಹಣ ಇದುವರೆವಿಗೂ ಯಾವ ಮಂತ್ರಿಗೂ ಸಿಕ್ಕಿಲ್ಲ. ಆದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ ಎಂದರು. ಸ್ವಕ್ಷೇತ್ರ ಹೊಳಲ್ಕೆರೆ ತಾಲೂಕಿನಲ್ಲಿಯೂ ಇದುವರೆವಿಗೂ ಬಡವರಿಗೆ ಒಂದೆ ಒಂದು ಮನೆ ಹಂಚದ ಸಚಿವರು ಕಾಲಹರಣ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು. ನಗರೋತ್ಥಾನದಡಿ ನಗರದಲ್ಲಿ ಯು.ಜಿ.ಡಿ. ನಿರ್ಮಾಣದ ಸಂದರ್ಭದಲ್ಲಿ ರಸ್ತೆಗಳೆಲ್ಲಾ ಹಾಳಾಗಿದೆ. ಕೇವಲ ಒಂದು ರಸ್ತೆಯನ್ನು ಡಾಂಬರೀಕರಣ ಮಾಡಿಸಲು ಸಚಿವರ ಕೈಯಲ್ಲಿ ಆಗಲಿಲ್ಲ. ಕೇಂದ್ರ ಸರ್ಕಾರ ಅಭಿವೃದ್ಧಿಗಾಗಿ ಕೋಟ್ಯಂತರ ರೂ.ಗಳನ್ನು ನೀಡಿದೆ. ಇದುವರೆವಿಗೂ ಕ್ರಿಯಾ ಯೋಜನೆಗೆ ಸಹಿ ಹಾಕಿಲ್ಲ. ಬಡ ಜಿಲ್ಲೆ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು
ಮಂಜೂರಾಗಿದ್ದರೂ ಕ್ಯಾಬಿನೆಟ್‌ನಲ್ಲಿ ಒಂದು ಬಾರಿಯೂ ಚರ್ಚಿಸದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅನ್ಯಾಯ ಮಾಡಿದ್ದಾರೆ ಎಂದು ಕುಟುಕಿದರು.
Related Articles
ಕೋಟ್ಯಂತರ ರೂ. ಕಮಿಷನ್ ನುಂಗಿದ್ದಾರೆ ಎಂದು ಟೀಕಿಸಿದರು.
Advertisement
ಹೊಳಲ್ಕೆರೆ ಅಮಿತ್ ಶಾ ಬಂದಾಗ ಸಾಗರೋಪಾದಿಯಲ್ಲಿ ಜನ ಸೇರಿದ್ದನ್ನು ಕಂಡು ಚುನಾವಣೆಯಲ್ಲಿ ಸೋಲುತ್ತೇನೆಂಬ ಭಯದಿಂದಬೋರ್ವೆಲ್ಗಳನ್ನು ಕೊರೆಸಿ ಹೊಳಲ್ಕೆರೆ ಕ್ಷೇತ್ರದ ಜನರನ್ನು ಸಮಾಧಾನಪಡಿಸಲು ಹೊರಟಿದ್ದಾರೆ. ಇದಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು. ಅಧಿ ಕಾರ ದುರ್ಬಳಕೆ ಮಾಡಿಕೊಂಡಿರುವ ಸಚಿವ ಎಚ್. ಆಂಜನೇಯ ಎಸ್.ಎಸಿ.,
ಎಸ್.ಟಿ. ಅಧಿಕಾರಿಗಳ ಕರೆಸಿಕೊಂಡು ರಾತ್ರೋ ರಾತ್ರಿ ಕೊಳವೆಬಾವಿಗಳನ್ನು ಕೊರೆಸಿ ಹಣ ದೋಚಿದ್ದಾರೆ. ನೋ ವಾಟರ್ ನೋ ಮನಿ ಎಂಬ ನಿಯಮ ಉಲ್ಲಂಘಿಸಿ ಜನಸಾಮಾನ್ಯರನ್ನು ಕಡೆಗಣಿಸಿ ಕಾಂಗ್ರೆಸ್ ಏಜೆಂಟರು ಹಾಗೂ ಸ್ವಜಾತಿಯವರಿಗೆ
ಮಾತ್ರ ಬೋರ್‌ವೆಲ್‌ಗಳನ್ನು ನೀಡಿದ್ದಾರೆ ಎಂದು ದೂರಿದರು. ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಚುನಾವಣಾ ಪ್ರಭಾರಿ ಟಿ.ಜಿ. ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಪಿ.ಲೀಲಾಧರ ಠಾಕೂರ್,
ಶ್ಯಾಮಲಾ ಶಿವಪ್ರಕಾಶ್, ಭೀಮರಾಜ್, ಕೆಎಂಎಫ್ ರವಿ, ಜಿತೇಂದ್ರ, ಜಿಪಂ ಸದಸ್ಯ ಮಹೇಶ್ವರಪ್ಪ, ರೇಖಾ, ಸಂಪತ್‌ಕುಮಾರ್, ಡಿ. ರಮೇಶ್, ಕಲ್ಲೇಶಯ್ಯ, ಶ್ರೀಕಾಂತ್, ಅಶೋಕ್, ಶಂಭು, ಅಭಿಲಾಷ್, ಜಯದೇವ್, ಸಾವಿಲ್‌ಶಿವಣ್ಣ, ಸಿರಿಗೆರೆ ಮೋಹನ್,
ಬಸಮ್ಮ, ಲೀಲಾವತಿ, ಮಂಜುಳಮ್ಮ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.