Advertisement

ಟಿಎಂಸಿ ವಿರುದ್ಧ ಜಮಖಂಡಿಯಲ್ಲಿ ಬಿಜೆಪಿ ಪ್ರತಿಭಟನೆ

05:28 PM Apr 18, 2021 | Team Udayavani |

ಜಮಖಂಡಿ: ನಗರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಟಿಎಂಸಿ ಪಕ್ಷದ ವಿರುದ್ಧ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ಜಿಲ್ಲಾ ಘಟಕ ಶನಿವಾರ ಪ್ರತಿಭಟನೆ ನಡೆಸಿತು. ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕಿ ಸುಜಾತಾ ಮೊಂಡಲಖಾನ್‌ ಮತ್ತು ಟಿಎಂಸಿ ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಘಟಕದ ಕಾರ್ಯಕರ್ತರು ತಹಶೀಲ್ದದಾರ್‌ ಪಿ.ಎಸ್‌. ಚನಗೊಂಡ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರ ವಿರುದ್ಧ ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕಿ ಸುಜಾತಾ ಮೊಂಡಲಖಾನ್‌ ಅವರು ಅವಹೇಳನಕಾರಿ ಹೇಳಿಕೆ ಗಮನ ಸೆಳೆಯಲು ಬಯಸುತ್ತೇವೆ ಎಂದರು. ಮಮತಾ ಬ್ಯಾನರ್ಜಿ ಅವರು ಬಡವರಾದ ಪರಿಶಿಷ್ಟ ಜಾತಿಯವರಿಗೆ ನೆರವಾಗಿದ್ದರೂ ಅವರ ಸಣ್ಣತನ ಬದಲಾಗಿಲ್ಲ. ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿ ಸಮುದಾಯದವರನ್ನು ಅವಮಾನಿಸುವ ಉದ್ದೇಶದಿಂದಲೇ ಅವರು ಭಿಕ್ಷುಕ ಪದಬಳಸಿದ್ದು ಖಂಡನಾರ್ಹ. ಪರಿಶಿಷ್ಟ ಸಮುದಾಯದವರ ಬಗ್ಗೆ ದ್ವೇಷದ ಮನೋಭಾವ ಹುಟ್ಟು ಹಾಕುವಂತಿದ್ದು ಆತಂಕಕಾರಿ ಸಂಗತಿಯಾಗಿದೆ ಎಂದರು.

ಬಿಜೆಪಿ ಎಸ್‌ಸಿ ಮೋರ್ಜಾ ಜಿಲ್ಲಾಧ್ಯಕ್ಷ ಪ್ರಕಾಶ ಕಾಳೆ ಮಾತನಾಡಿ, ಆಘಾತಕಾರಿ, ಅವಮಾನಕರ ಹೇಳಿಕೆಗಳು ಅಂಬೇಡ್ಕರ್‌ ಪ್ರಜಾಪ್ರಭುತ್ವ ಚಿಂತನೆ ಖಂಡಿಸುವಂತಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡರು ಅನಗತ್ಯವಾಗಿ ಹೇಳಿಕೆ ನೀಡಿ ಸಾಮಾಜಿಕ ದ್ವೇಷ ಸೃಷ್ಟಿ ಮಾಡುತ್ತಿದೆ. ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಸಮಾಜದಲ್ಲಿ ದ್ವೇಷ ಹರಡಲು ಮುಂದಾಗಿರುವ ತೃಣಮೂಲ ಕಾಂಗ್ರೆಸ್‌ ಪಕ್ಷ ಮತ್ತು ಅದರ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಸಿ ಮೋರ್ಜಾ ನಗರಘಟಕ ಅಧ್ಯಕ್ಷ ರಮೇಶ ಆಲಬಾಳ, ನಗರಘಟಕ ಅಧ್ಯಕ್ಷ ಅಜಯ ಕಡಪಟ್ಟಿ, ನಗರ ಯೋಜನಾ ಪ್ರಾ  ಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ತಾ.ಪಂ. ಅಧ್ಯಕ್ಷೆ ಸವಿತಾ ಕಲ್ಯಾಣಿ, ವಿಜಯಲಕ್ಷ್ಮೀ ಉಕುಮನಾಳ, ಗೀತಾ ಸೂರ್ಯವಂಶಿ, ಕಾಶೀಬಾಯಿ ಹೂಗಾರ, ರಾಜು ಚಿಕನಾಳ, ಗಣೇಶ ಶಿರಗಣ್ಣವರ, ಶ್ರೀಮತಿ ಸಿಂಗಾರಿ, ಕುಶಾಲ ವಾಘಮೋರೆ, ಮಲ್ಲೇಶ ಹೆಸಮನಿ ಸಹಿತ ಹಲವರು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next