Advertisement
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ವಿಪಕ್ಷ ನಾಯಕರು, ಪ್ರತಿಪಕ್ಷವನ್ನ ಶಾಡೋ ಗವರ್ನಮೆಂಟ್ ಅಂತ ಕರೆಯುತ್ತೇವೆ. ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ಮಾಡಿ ನಮ್ಮ ನಾಯಕರಾದ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ಮಾತಾಡಿದ್ದಾರೆ.ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 350 ಹಾಗೂ ತ್ರಿವಳಿ ತಲಾಖ್ ಬಗ್ಗೆ ಮತ್ತೆ ಪರಿಶೀಲನೆ ಮಾಡೋದಾಗಿ ಹೇಳಿರುವ ಪಕ್ಷದವರು. ಅವರು ಅನುಕೂಲಕ್ಕೆ ತಕ್ಕಂತೆ ರಾಜಕೀಯ ಬಳಕೆ ಮಾಡಿಕೊಳ್ಳುತ್ತಾರೆ ಎಂದರು.
Related Articles
Advertisement
ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರ ಕುರುಡು ಸರ್ಕಾರ ಆಗಿತ್ತು. ಬಿಟ್ ಕಾಯಿನ್ ಹಗರಣ ಹೊರಗೆ ತಂದಿದ್ದು ಯಾರು.? ಸಿದ್ದರಾಮಯ್ಯ ಅವರು ನಿದ್ರಾಮಯ್ಯ ಆಗಿ ಮಲಗಿದ್ದರು. ಕೆಪಿಸಿಸಿ ಕಚೇರಿಯಲ್ಲಿ ನಿಮ್ಮವರೇ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದರು. ನಮ್ಮವರೇ ಹಣ ಪೀಕುತ್ತಿದ್ದಾರೆ ಅಂತ, ಇದಕ್ಕೆ ನಿಮ್ಮ ಉತ್ತರ ಏನು.? ನಿಮ್ಮ ಸರ್ಕಾರದ ಅವಧಿಯಲ್ಲಿ ಆದ ಅಕ್ರಮಗಳನ್ನ, ನಾವು ಈಗ ತನಿಖೆ ಮಾಡುತ್ತಿದ್ದೇವೆ. ಅದು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದೆ, ಯಾರೂ ಅಕ್ರಮದಲ್ಲಿ ಭಾಗಿಯಾಗಬೇಡಿ, ಯಾರನ್ನೂ ಭಾಗಿಯಾಗಲು ಬಿಡಬೇಡಿ ಅಂತ. ಬಿಜೆಪಿ ಇಂದಲೇ ಸುಮೋಟೋ ದಾಖಲಿಸಿದ್ದೇವೆ. ಅರ್ಕಾವತಿ ಡಿ ನೋಟಿಫಿಕೇಷನ್, ಪಿಎಸ್ಐ ನೇಮಕಾತಿ ಎಲ್ಲದರ ಬಗ್ಗೆ ನಿಮ್ಮ ಪಕ್ಷ, ಶಾಸಕರು ಪ್ರಶ್ನೆ ಮಾಡಿದ್ರಾ.? ಈಗ ಯಾವುದೇ ಪಕ್ಷದವರಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ದೇಶದ ನಾಗರಿಕ ಅಲ್ಲ
2013ರಿಂದ ಬೇರು ಬಿಟ್ಟವರು ಇವರು. ನೀವು ಕ್ರಮ ಕೈಗೊಳ್ಳದೆ,ಬೇರೂರಲು ಅವಕಾಶ ನೀಡಿದಿರಿ. ಪ್ರಿಯಾಂಕ್ ಖರ್ಗೆ ಅವರು ಪ್ರಚಾರ ಪ್ರಿಯರು. ಅವರಿಗೆ ಪೊಲೀಸ್ ನೋಟೀಸ್ ನೀಡಿದ್ದಾರೆ. ದಂಡ ಸಂಹಿತಾ ಪ್ರಕ್ರಿಯೆ ಹೇಳುವಂತೆ, ಎಲ್ಲಾ ರೀತಿಯ ಮಾಹಿತಿ ನೀಡಬೇಕು ಅಂತ. ಅದು ಈ ದೇಶದ ನಾಗರಿಕನ ಕೆಲಸ.ಅವರು ಯಾವುದೇ ದಾಖಲೆ ನೀಡದೆ, ಈ ದೇಶದ ನಾಗರಿಕ ಅಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಬೇರೆಯವರ ಹೆಗಲಿಗೆ ಕಟ್ಟಿ, ತಮ ಜವಾಬ್ದಾರಿ ಇಂದ ನುಣುಚಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ರಾಷ್ಟ್ರದ ನಾಯಕರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಿಮ್ಮ ಬಳಿ ಯಾವುದೇ ಸಾಕ್ಷಿ ಇದ್ದರೂ, ಅದನ್ನ ಯಾವುದೇ ಸ್ಟೇಷನಿಗೆ ತೆರಳಿ ದೂರು ನೀಡಬಹುದು. ಇಲ್ಲ ಮಾಧ್ಯಮದಲ್ಲಿ ಬಿಡುಗಡೆ ಮಾಡಿ. ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ದಾರೆ. ತಮ್ಮ ಸರ್ಕಾರದಲ್ಲಿ ನಡೆದ 30 ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಯ್ತು.ಲೋಕಾಯುಕ್ತವನ್ನ ಮುಚ್ಚಿಹಾಕಿ, ಎಸಿಬಿ ಸ್ಥಾಪನೆ ಮಾಡಿಕೊಂಡರು. ಎಸಿಬಿ ಮೂಲಕ ಎಲ್ಲಾ ಹಗರಣಗಳ ಬಗ್ಗೆ ಕ್ಲೀನ್ ಚಿಟ್ ಪಡೆದುಕೊಂಡರು. ಈ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ ಅಂತ ಕರೆಸಿಕೊಂಡವರು. ಈಗ ದ್ವೇಷಕ್ಕಾಗಿ, ವಯಕ್ತಿಕ ಹಿತಾಸಕ್ತಿಗಾಗಿ ರಾಜೀನಾಮೆ ಕೇಳುತ್ತಿದ್ದೀರಿ. ಡಿ.ಕೆ ಶಿವಕುಮಾರ್ ಅವರು ಎಲ್ಲರ ಲೆಕ್ಕ ಚುಕ್ತಾ ಮಾಡುತ್ತೇನೆ, ಅಕೌಂಟ್ ಕ್ಲಿಯರ್ ಮಾಡುತ್ತೇನೆ ಅಂತ ಹೇಳಿದ್ದರು. ಈ ಹೇಳಿಕೆ ಮೊದಲ ಬಾರಿ ನೀಡಿಲ್ಲ.ಇದು ಬೆಳಗಾವಿಯಲ್ಲಿ ಶುರುವಾಗಿದ್ದು.ಈಶ್ವರಪ್ಪ ಅವರ ಜತೆ ಸದನದಲ್ಲಿ ಹೇಳಿದ್ದರು. ಕೆಂಪೇಗೌಡ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ವಿರುದ್ಧ ಹೇಳಿದರು. ಇದು ಕಾಂಗ್ರೆಸ್ ನ ಟೂಲ್ ಕಿಟ್ ಆಗಿದೆ ಎಂದರು.
ಎರಡು ರೀತಿಯ ಕೆಲಸ
ಕಾಂಗ್ರೆಸ್ ಎರಡು ರೀತಿಯ ಕೆಲಸ ಮಾಡುತ್ತಿದೆ. ಒಂದು ಅಧಿಕಾರದಲ್ಲಿ ಇದ್ದಾಗ ಹಗರಣ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವುದು. ಅಧಿಕಾರ ಇಲ್ಲದಿರುವಾಗ ಜನರಿಗೆ ಸುಳ್ಳು ಹೇಳಿ, ಅರಾಜಕತೆ ಸೃಷ್ಟಿ ಮಾಡುವುದು. ಎಲ್ಲಾ ಹಗರಣದ ಬಗ್ಗೆ ತನಿಖೆಗೆ ನೀಡಲಾಗಿದೆ. ಪರೀಕ್ಷೆಗಳು ಪಾರದರ್ಶಕತೆ ಇಂದ ನಡೆಸಲು ನಮ್ಮ ಸರ್ಕಾರ ಮುಂದಾಗಿದೆ. ಯುವ ಜನರ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಎಂದರು.