Advertisement

ಮೋದಿ 2.0 ಕ್ಯಾಬಿನೆಟ್; ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅಮಿತ್ ಶಾ

10:18 AM Jun 02, 2019 | Nagendra Trasi |

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರದಲ್ಲಿ ಅಮಿತ್ ಶಾ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ ಶನಿವಾರ ಗೃಹ ಸಚಿವರಾಗಿ ಅಧಿಕಾರವಹಿಸಿಕೊಳ್ಳುವ ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ.

Advertisement

54ವರ್ಷದ ಅಮಿತ್ ಶಾ ಬಿಳಿ ಬಣ್ಣದ ಕುರ್ತಾ ಮೇಲೆ ತಿಳಿ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಇಂದು ಸಂಸತ್ ನ  ಉತ್ತರ ಬ್ಲಾಕ್ ನಲ್ಲಿರುವ ಕೊಠಡಿಗೆ ತೆರಳಿದ್ದರು. ಶಾ ಅವರನ್ನು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಇತರ ಅಧಿಕಾರಿಗಳು ಸ್ವಾಗತಿಸಿ ಬರಮಾಡಿಕೊಂಡಿದ್ದರು.

ರಾಜ್ ನಾಥ್ ಸಿಂಗ್ ಅವರ ಕೈಯಲ್ಲಿದ್ದ ಗೃಹ ಸಚಿವಾಲಯದ ಅಧಿಕಾರ ಇದೀಗ ಶಾ ಅವರಿಗೆ ಹಸ್ತಾಂತರವಾಗಿದೆ. ಪ್ರಸ್ತುತ ಕ್ಯಾಬಿನೆಟ್ ನಲ್ಲಿ ರಾಜ್ ನಾಥ್ ಸಿಂಗ್ ರಕ್ಷಣಾ ಸಚಿವರಾಗಿದ್ದಾರೆ. ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಅಮಿತ್ ಶಾ ಅವರು ಹಲವಾರು ಕಠಿಣ ಹಾಗೂ ಹೊಸ ರೂಪರೇಶೆಯನ್ನು ನೀಡಲಿದ್ದಾರೆ ಎಂದು ವರದಿ ವಿಶ್ಲೇಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next