ಬೆಂಗಳೂರು: ರೇಣುಕಾಚಾರ್ಯ ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಬಿಜೆಪಿ ತಾಯಿಯ ಸಮಾನ. ನಾನು ಸಭೆ ಮಾಡಿಲ್ಲ, ಶಾಸಕರನ್ನು ತಿಂಡಿಗೆ ಕರೆದಿದ್ದೆ ಅಷ್ಟೇ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಅರುಣ್ ಸಿಂಗ್ ಭೇಟಿಯ ಬಳಿಕ ಮಾತನಾಡಿದ ಅವರು, ನಮ್ಮ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ್ದೇವೆ. ಎಲ್ಲವೂ ಮನವರಿಕೆ ಮಾಡಿದ್ದೇವೆ. ಕೋವಿಡ್ ಸಂಧರ್ಭದಲ್ಲಿ ಕೆಲಸದ ಬಗ್ಗೆ ಹೇಳಿದ್ದೇವೆ. ಇದರ ಬಗ್ಗೆಅರುಣ್ ಸಿಂಗ್ ಅವರಿಗೂ ಗೊತ್ತಿದೆ. ಕೆಲವು ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲವನ್ನೂ ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಶಾಸಕರ ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ಉಪಹಾರಕ್ಕಾಗಿ ಸೇರುತ್ತಿರುತ್ತೇವೆ. ಇವತ್ತು ಸೇರಿದ್ದರಲ್ಲಿ ವಿಶೇಷ ಏನು ಇಲ್ಲ. ಪಕ್ಷದ ಸಂಘಟನೆ ವಿರುದ್ಧ ಸಭೆ ಮಾಡಿಲ್ಲ ಎಂದರು.
ಇದನ್ನೂ ಓದಿ:ಯಾರೋ ಒಂದಿರಿಬ್ಬರು ಬಿಟ್ಟರೆ, ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ: ರೇಣುಕಾಚಾರ್ಯ
ಅರವಿಂದ ಬೆಲ್ಲದ ಪೋನ್ ಟ್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಪೋನ್ ಟ್ಯಾಪ್ ಬಗ್ಗೆ ನನಗೆ ಗೊತ್ತಿಲ್ಲ. ಅವರು ಕೀಳು ಮಟ್ಟದ ಪ್ರಚಾರ ಮಾಡುತ್ತಿದ್ದರೆ. ಸೂಟ್ ಹೊಲಿಸಿಕೊಂಡು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಇದನ್ನೂ ಓದಿ: ಜೈಲಿನಲ್ಲಿರುವ ವಂಚಕ ಯುವರಾಜ ಸ್ವಾಮಿಯಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಗೆ ದೂರವಾಣಿ ಕರೆ?