Advertisement
ಮೈಸೂರು ಜಿಲ್ಲೆ, ಕೆ.ಆರ್. ನಗರ ತಾಲೂಕು, ಗಂಧನಹಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಂಗೋಳ್ಳಿ ರಾಯಣ್ಣ ಹಾಗೂ ಕನಕದಾಸರು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರು, ಯುವಕರು ಮಹಾನ್ ವ್ಯಕ್ತಿಗಳ ತತ್ವ ಸಿದ್ದಾಂತಗಳನ್ನು ಪಾಲಿಸುವಂತೆ ಕರೆ ನೀಡಿದ ಸಿದ್ದರಾಮಯ್ಯ ನಾನು ಮುಖ್ಯ ಮಂತ್ರಿಯಾಗಿದ್ದಾಗ ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿಗಾಗಿ 260 ಕೋಟಿ ಹಣವನ್ನು ಸಹ ಇಟ್ಟಿದ್ದೆ. ನಮ್ಮ ಸರ್ಕಾರ ಹೋದ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿಲ್ಲ, ಮುಂದಿನ ದಿನದಗಳಲ್ಲಿ ಸಂಗೋಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ನಡೆಯಲಿ. ಇದಕ್ಕಾಗಿ ಬಿಜೆಪಿ ಸರ್ಕಾರದಲ್ಲಿ ನಮ್ಮ ಕುರುಬ ಸಮಾಜದ ನಾಲ್ವರು ಮಂತ್ರಿಗಳು ಇದ್ದಾರೆ, ಈ ಬಗ್ಗೆ ಮುಖ್ಯ ಮಂತ್ರಿಗಳ ಜತೆಯಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಿ ಎಂದು ವೇದಿಕೆಯಲ್ಲಿದ್ದ ತೋಟಗಾರಿಕೆ ಸಚಿವ ಆರ್.ಶಂಕರ್ ಗೆ ಹೇಳಿದರು.
ಗಂಧನಹಳ್ಳಿ: ಇನ್ನೂ ಗಂಧನಹಳ್ಳಿ ಗ್ರಾಮ ನಾನು ಲಾಯರ್ ಆಗಿದ್ದಾಗನಿಂದಲೂ ಪರಿಚಯ. ಹಾಗಾಗಿ ಗಂಧನಹಳ್ಳಿ ಗ್ರಾಮದ ಜನರು ನನ್ನನ್ನು ಕಂಡರೆ ಬಹಳ ಪ್ರೀತಿ. ನನಗೂ ಸಹ ಈ ಗ್ರಾಮದ ಬಗ್ಗೆ ಅಪಾರವಾದ ಪ್ರೀತಿ ವಿಶ್ವಾಸ ಇದೆ, ಗಂಧನಹಳ್ಳಿ ಗ್ರಾಮದಲ್ಲಿ ಇನ್ನು ಮೂಲಭೂತ ಸೌಕರ್ಯಗಳನ್ನೇ ಮಾಡಿಲ್ಲ, ಕುಡಿಯುವ ನೀರಿನ ಘಟಕವನ್ನು ಕೇಳಿದ್ದೀರಿ, ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನಾನ ಅನುದಾನದ ಮೂಲಕ ಮಾಡಿಸುತ್ತೇನೆ ಎಂದು ಹೇಳಿದ ಅವರು ನಾನೇ ಗಂಧನಹಳ್ಳಿ ಗ್ರಾಮದ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಪ್ರೌಢಶಾಲೆ ಕೊಟ್ಟಿದ್ದು, ಇವಾಗ ಹಾಸ್ಟಲ್ ಕೇಳಿದ್ದರಿ ಆದರೆ ಹಾಸ್ಟಲ್ ಬೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನೇ ಕೊಡುತ್ತೇನೆ, ಕಪ್ಪಡಿ ಸೇತುವೆ ಎಲ್ಲವನ್ನು ಮಾಡುತ್ತೇನೆ. ಇನ್ನು ಎರಡು ವರ್ಷ ಕಾಯಬೇಕೆಂದರು.
ಎರಡು ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇನೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿ.ಮಂಚನಹಳ್ಳಿ ಮಹದೇವ್ ಮಗಳು ಐಶ್ವರ್ಯಳಿಗೆ ಟಿಕೇಟ್ ತಪ್ಪಿಸಿ ಡಿ.ರವಿ ಶಂಕರ್ ಗೆ ನೀಡಿದೆ. ಪಾಪ ಅಲ್ಪ ಮತದಲ್ಲಿ ಸೋತ, ಈ ಬಾರಿ ಹಾಗೇ ಹಾಗಬಾರದು. ಮತ್ತೇ ಡಿ.ರವಿಶಂಕರ್ ಗೆ ಟಿಕೇಟ್ ನೀಡುತ್ತೇನೆ. ಅಧಿಕ ಮತಗಳಿಂದ ಗೆಲ್ಲಿಸುವ ಜವಬ್ದಾರಿ ನಿಮ್ಮದು ಎಂದ ಸಿದ್ದರಾಮಯ್ಯನವರರು. ಮುಂಬರುವ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು.
ನಂತರ ತೋಟಗಾರಿಕೆ ಸಚಿವ ಆರ್.ಶಂಕರ್ ಹಾಗೂ ಮಾಜಿ ಸಚಿವರಾದ ಸಿ.ಹೆಚ್.ವಿಜಯ್ ಶಂಕರ್, ಹೆಚ್.ಎಂ.ರೇವಣ್ಣ ಮಾತನಾಡಿದರು. ಗಂಧನಹಳ್ಳಿ ಗ್ರಾಮದ ಯಜಮಾನರುಗಳು ಎಲ್ಲರಿಗೂ ಆತ್ಮೀಯವಾಗಿ ಶಾಲು ಹಾರ ಹಾಕಿ ಅಭಿನಂದಿಸಿದರು.