ತುಮಕೂರು: ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಗೆ ಹೆಚ್ಚು ಯುವಜನರನ್ನು ಸೆಳೆಯುವ ನಿಟ್ಟಿ ನಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಕೆಲಸ ಮಾಡ ಬೇಕಾಗಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ತಿಳಿಸಿದರು.
ನಗರದ ವಿಘ್ನೇಶ್ವರ ಕಂರ್ಪಟ್‌ನಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆಸೇರಿದ ಮೋದಿ ದೇಶದ ಪ್ರಧಾನಿಯಾಗಿದ್ದಾರೆ.ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಬೂತ್‌ಗೆ 10 ಜನರಂತೆ ಹಿಂದುಳಿದವರ್ಗದ ಯುವಜನರು ಬಿಜೆಪಿಗೆ ದುಡಿಯುವಂತೆಮಾಡಿ, ನಮ್ಮ ಸಮುದಾಯ ಸಮಾಜದಮುಖ್ಯವಾಹಿನಿಗೆ ಬರುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯಒಬಿಸಿ ಮೋರ್ಚಾವನ್ನು ಸದೃಢವಾಗಿ ಕಟ್ಟಿ, ಸಮಾಜದ ಮುಖ್ಯವಾಹಿನಿಗೆ ತಂದು, ರಾಜಕೀಯಅಧಿಕಾರ ವನ್ನು ಪಡೆಯುವ ನಿಟ್ಟಿನಲ್ಲಿ ಈ ಕಾರ್ಯಾಕಾರಿಣಿ ಸಭೆಯನ್ನು ಆಯೋಜಿಸಲಾಗಿದೆ.ರಾಜ್ಯದಲ್ಲಿ ಹಿಂದು ಳಿದ ವರ್ಗಕ್ಕೆ ಸೇರಿದ 812ಜಾತಿ, ಪಂಗಡ, ಉಪಪಂಗಡಗಳಿದ್ದು, ಇವುಗಳನ್ನುಬಿಜೆಪಿ ಅಡಿಯಲ್ಲಿ ತಂದು ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡರಸಲಹೆಯಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಮುಂಬರುವ ಜಿ.ಪಂ., ತಾಪಂ. ಚುನಾವಣೆಗಳಲ್ಲಿಯೂ ಒಬಿಸಿ ಮೋರ್ಚಾದ ಸದಸ್ಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಈ ಸಭೆ ಮಹತ್ವ ಪಡೆದುಕೊಂಡಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ರುದ್ರೇಶ್,ದಾವಣಗೆರೆ ವಿಭಾಗದ ಲಕ್ಷ್ಮೀಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಸಂಪಿಗೆ ಶ್ರೀಧರ್, ರವಿ ಹೆಬ್ಟಾಕ್,ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಕೆ.ವೇದಮೂರ್ತಿ, ಗೋಕಲ್ ಮಂಜುನಾಥ್, ಬನಶಂಕರಿ ಬಾಬು, ಚಂದ್ರ ಬಾಬು ಇದ್ದರು.
ಹಿಂದುಳಿದವರನ್ನು ಸಂಘಟಿಸಿ :
ಬಿಜೆಪಿ ಶಿಸ್ತಿನ ಪಕ್ಷ, ಅದರಲ್ಲಿಯೂ ತುಮಕೂರು ಜಿಲ್ಲೆಯ ಒಬಿಸಿ ಮೋರ್ಚಾದ ಬಗ್ಗೆ ರಾಜ್ಯದಲ್ಲಿಯೇ ಒಳ್ಳೆಯ ಹೆಸರಿದೆ. ಆದ್ದರಿಂದಮೋರ್ಚಾದ ಅಧ್ಯಕ್ಷ ಶಂಕರಪ್ಪ ತಮ್ಮ ಹಿರಿತನವನ್ನು ಉಪಯೋಗಿಸಿ ಕೊಂಡು ಜಿಲ್ಲೆಯಲ್ಲಿ ಹಿಂದುಳಿದವರನ್ನು ಸಂಘಟಿಸುವ ಮೂಲಕಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕುಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಹೆಚ್ಚಿನಸದಸ್ಯರು ಗೆಲುವು ಪಡೆಯುವಂತೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ತಿಳಿಸಿದರು.