ಬೆಂಗಳೂರು: ಉಪಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದು ಲಾಭವಾಗಿಲ್ಲ. ಜೆಡಿಎಸ್ 15 ಸಾವಿರ ಮತ ಪಡೆಬಹುದು ಎಂದು ನಿರೀಕ್ಷೆ ಇತ್ತು. ಆದರೆ ಜೆಡಿಎಸ್ ಅಷ್ಟು ಮತ ಪಡೆದಿಲ್ಲ. ಹೀಗಾಗಿ ಜೆಡಿಎಸ್ ನಿಂದ ಬಿಜೆಪಿಗೆ ಅನುಕೂಲವಾಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಂದಗಿ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಅಂತರದ ಗೆಲುವು ಬಂದಿದೆ. ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾನಗಲ್ ನಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಅಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ಹಾನಗಲ್ ನಲ್ಲೂ ಕಮಲ ಅರಳುವ ವಿಶ್ವಾಸ ಇದೆ ಎಂದರು.
ಸಿಂದಗಿ ಗೆದ್ದಿದ್ದೇವೆ, ಹಾನಗಲ್ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಗೆಲ್ಲುತ್ತದೆ. ಫೈನಲ್ ಟ್ಯಾಲಿ ಬಂದಾಗ ಗೊತ್ತಾಗುತ್ತದೆ ಎಂದ ಅವರು ಇದು ಸಿಎಂ ಬೊಮ್ಮಯಿಗೇನು ಪರೀಕ್ಷೆ ಅಲ್ಲ. ಎರಡೂ ಕಡೆ ಗೆದ್ದರೆ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಬಲ ಬಂದತಾಗುತ್ತದೆ ಎಂದರು.
ಇದನ್ನೂ ಓದಿ:ಮತದಾರ ಬದಲಾವಣೆ ಬಯಸಿದ್ದಾನೆ, ಉಪಚುನಾವಣೆ ಫಲಿತಾಂಶವೇ ಸಾಕ್ಷಿ: ಡಿಕೆ ಶಿವಕುಮಾರ್
ಹಾನಗಲ್ ಕ್ಷೇತ್ರದಲ್ಲಿ ಉದಾಸಿ ಅನಾರೋಗ್ಯದಿಂದ ಎರಡು ವರ್ಷ ಕ್ಷೇತ್ರ ಕಡೆ ಹೆಚ್ಚಿನ ಗಮನ ಕೊಡಲು ಆಗಿರಲಿಲ್ಲ. ಆದರೆ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಹಾನಗಲ್ ನಲ್ಲಿ ಎಲ್ಲಾರೂ ಒಟ್ಟಾಗಿ ಪ್ರಚಾರ ಮಾಡಿದ್ದಾರೆ. ಗೆಲ್ಲುವ ವಿಶ್ವಾಸ ಇದೆ ಸಾರ್ವತ್ರಿಕ ಚುನಾವಣೆಗೂ ಇದಕ್ಕೆ ಏನು ಸಂಬಂಧ ಇಲ್ಲ ಎಂದರು.