Advertisement
ಜತೆಗೆ “ಕಮಲವು ಅರಳಲಿ, ಕೇಸರಿ ಮರಳಲಿ, ಕರ್ನಾಟಕದಲ್ಲಿ ಕಮಲ ರಂಗೇರಲಿ, ಒಂದೇ ಮಾತರಂ, ಜೈ ಬಿಜೆಪಿ’ ಥೀಮ್‌ಸಾಂಗ್ ಸೀಡಿ ಸಹ ಸಿದ್ಧಗೊಳಿಸಲಾಗಿದ್ದು, ಬಿಜೆಪಿ ಸಾಧನೆ, ಕಾಂಗ್ರೆಸ್‌ನ ವೈಫಲ್ಯಗಳ ಕರಪತ್ರಗಳನ್ನು ರಾಜ್ಯದ ಎಲ್ಲ ವಿಧಾನಸಭೆಕ್ಷೇತ್ರದ ಬೂತ್ ಮಟ್ಟಕ್ಕೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ.
Related Articles
Advertisement
ರಾಜ್ಯದ 224 ಕ್ಷೇತ್ರಗಳಲ್ಲೂ ಸಂಚರಿಸುವ ಯಾತ್ರೆ ಯಶಸ್ವಿಗಾಗಿ ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವಾರು ಸಮಿತಿ ರಚಿಸಲಾಗಿದೆ. ರಥ ನಿರ್ವಹಣೆ, ಯಾತ್ರಾ ಪ್ರಮುಖ್, ಬೈಕ್ ರ್ಯಾಲಿ ಪ್ರಮುಖ್, ಆರ್ಥಿಕ ಸಮಿತಿ, ಊಟ ಮತ್ತು ವಸತಿ ಸಮಿತಿ, ಸ್ವತ್ಛತಾ ಸಮಿತಿ, ಮಾಧ್ಯಮ ಸಮಿತಿ, ಸಾಮಾಜಿಕ ಜಾಲತಾಣ ನಿರ್ವಹಣೆ ಸಮಿತಿ ರಚಿಸಲಾಗಿದೆ.
ಪರಿವರ್ತನಾ ಯಾತ್ರೆಗೆ ರಾಜ್ಯಮಟ್ಟದಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಅನುಮತಿ ಪಡೆಯಲಾಗಿದೆಯಾದರೂ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿಕೊಟ್ಟು ಅನುಮತಿ ಪಡೆಯಲಾಗುವುದು . ಯಾತ್ರೆ ಕೊಡಗು ಜಿಲ್ಲೆಗೆ ಪ್ರವೇಶ ಮಾಡುವುದಕ್ಕೆ ಅಲ್ಲಿನ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಅರಕಲಗೂಡಿನಿಂದ ನೇರವಾಗಿ ಪುತ್ತೂರಿಗೆ ತೆರಳಿಸುಳ್ಯದಲ್ಲಿ ಮರುದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು. ಉದ್ಘಾಟನೆಯಿಂದ ಸಮಾರೋಪದವರೆಗೆ 224 ಕ್ಷೇತ್ರಗಳಲ್ಲಿ ಸಂಚಾರ ಮತ್ತು ಭಾಷಣ ಎಲ್ಲವೂ ವಿಡಿಯೋ, ಫೋಟೋ ಸಹಿತ ದಾಖಲೀಕರಣ ಮಾಡಲಾಗುವುದು. ಪರಿವರ್ತನಾಯಾತ್ರೆ ಸಲುವಾಗಿಯೇ ಬಿಜೆಪಿ ಕಾರ್ಯಾಲಯ ಹೊರತುಪಡಿಸಿ ಮತ್ತೂಂದು ಕಾರ್ಯಾಲಯ ಸ್ಥಾಪಿಸಲಾಗಿದ್ದು, ಇದೇ ಕಚೇರಿಯ 3ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. 75 ದಿನಗಳ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ವಿಧಾನಮಂಡಲ ಅಧಿವೇಶನ ಹಾಗೂ ಸಂಸತ್ ಅಧಿವೇಶನವೂ ಅದೇ ಸಂದರ್ಭದಲ್ಲಿ ನಡೆಯುವುದರಿಂದ ಅಲ್ಲೂ ನಮ್ಮ ಹಾಜರಿ ಇರುವಂತೆ ನೋಡಿಕೊಂಡು ಯಾತ್ರೆಯಲ್ಲಿ ಭಾಗವಹಿಸಬೇಕಾದ ನಾಯಕರ ತಂಡ ರಚಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ವಕ್ತಾರರಾದ ವಾಮನಾಚಾರ್ಯ, ಸಹ ವಕ್ತಾರರಾದ ಎ.ಎಚ್.ಆನಂದ್, ಮಾಳವಿಕಾ ಅವಿನಾಶ್, ಮಧುಶ್ರೀ, ಲಹರಿ ವೇಲು ಉಪಸ್ಥಿತರಿದ್ದರು. ಶೋಭಾ ಪರಿಕಲ್ಪನೆ
ಪರಿವರ್ತನಾ ಯಾತ್ರೆಗೆ ರಚಿಸಲಾಗಿರುವ “ಕಮಲವು ಅರಳಲಿ, ಕೇಸರಿ ಮರಳಲಿ, ಕರ್ನಾಟಕದಲ್ಲಿ ಕಮಲ ರಂಗೇರಲಿ, ಒಂದೇ ಮಾತರಂ, ಜೈ ಬಿಜೆಪಿ’ ಥೀಮ್‌ಸಾಂಗ್ ಶೋಭಾ ಕರಂದ್ಲಾಜೆ ಅವರ ಪರಿಕಲ್ಪನೆಯಡಿ ಹರ್ಷಭಟ್ ಎಂಬುವರು ರಚನೆ ಮಾಡಿ ಪುತ್ತೂರಿನ ಜಗದೀಶ್ ಎಂಬುವರು ಹಾಡಿದ್ದಾರೆ. ಕರಪತ್ರದಲ್ಲೇನಿದೆ?
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಅವಧಿಯಲ್ಲಿ ಮಾಡಲಾದ ಸಾಧನೆಗಳು. ಪ್ರತ್ಯೇಕ ಕೃಷಿ ಬಜೆಟ್ ಮಂಡನೆ, ಸಾವಯವ ಕೃಷಿ ಮಿಷನ್‌ಗೆ 200 ಕೋಟಿ ರೂ. ಅನುದಾನ, 10 ಎಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, 20 ಲಕ್ಷ ರೈತರಿಗೆ ಕಿಸಾನ್‌ಕಾರ್ಡ್, ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ, ಭಾಗ್ಯಲಕ್ಷ್ಮಿ, ಮಡಿಲು ಯೋಜನೆ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಆರ್ಥಿಕ ನೆರವು. ಸಕಾಲ ಯೋಜನೆ ಜಾರಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉಜ್ವಲ ಯೋಜನೆ, ಜನ್‌ಧನ್, ಮುದ್ರಾ ಯೋಜನೆ, ಆದರ್ಶ ಗ್ರಾಮ, ಸ್ಮಾರ್ಟ್ ಸಿಟಿ, ಡಿಜಿಟಲ್ ಭಾರತ್, ಜಿಎಸ್‌ಟಿ ಜಾರಿ, ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯಾ ಸಮೃದಿಟಛಿ ಯೋಜನೆ ಜಾರಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ದ ವೈಫಲ್ಯಗಳಲ್ಲಿ 2000 ರೈತರ ಆತ್ಮಹತ್ಯೆ, ಎಸಿಬಿ ದುರುಪಯೋಗ, ಡಿವೈಎಸ್‌ಪಿ ಗಣಪತಿ , ಡಿ.ಕೆ.ರವಿ, ಕಲ್ಲಪ್ಪ ಹಂಡಿಬಾಗ್, ಅನುರಾಗ್ ತಿವಾರಿ ಸಾವು ಪ್ರಕರಣ, ಸ್ಟೀಲ್ ಬ್ರಿಡ್ಜ್, ದುಬಾರಿ ವಾಚ್ ಪ್ರಕರಣ ಪ್ರಸ್ತಾಪಿಸಲಾಗಿದೆ. ಮೂವರು ಮಾತ್ರ
ಪರಿವರ್ತನಾ ಯಾತ್ರೆಗೆ ಬಿಜೆಪಿ ಕರ್ನಾಟಕ ಘಟಕ ವತಿಯಿಂದ ಮುದ್ರಿಸಿರುವ ಕರಪತ್ರ ಹಾಗೂ ಪೋಸ್ಟರ್‌ನಲ್ಲಿ ಪ್ರಧಾನಿ
ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರಗಳು ಮಾತ್ರ ಇವೆ. ಉಳಿದಂತೆ ಯಾವ ನಾಯಕರ ಚಿತ್ರಗಳೂ ಇಲ್ಲ. ನ. 10ರಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡುತ್ತಿದೆ. ಆದರೆ, ನಾವು ನವೆಂಬರ್ 8ರಂದು ಕೊಡಗು ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ನವೆಂಬರ್ 9 ಕ್ಕೆ ನಿರ್ಗಮಿಸುತ್ತೇವೆ, ಪುತ್ತೂರಿನಲ್ಲಿ ವಾಸ್ತವ್ಯ ಮಾಡಿಕೊಳ್ಳುತ್ತೇವೆ ಎಂದರೂ ಜಿಲ್ಲಾಡಳಿತ ಒಪ್ಪುತ್ತಿಲ್ಲ. ನಮ್ಮ ಯಾತ್ರೆ ಹತ್ತಿಕ್ಕುವ ಕೆಲಸವೂ ನಡೆಯುತ್ತಿದೆ. ಆದರೆ, ನಾವು ಗಲಾಟೆ ಮಾಡಲು ಹೋಗುತ್ತಿಲ್ಲ. ಸರ್ಕಾರ ಈ ಬಗ್ಗೆ ವಿನಾಕಾರಣ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಯಾತ್ರೆಗೆ ಅನುಮತಿ ಕೊಡಬೇಕು .
– ಶೋಭಾ ಕರಂದ್ಲಾಜೆ, ಸಂಸದೆ