Advertisement

ಪ್ಯಾರಡೈಸ್‌: ಹಕ್ಕುಚ್ಯುತಿ ನಿರ್ಣಯಕ್ಕೆ ಸಿನ್ಹಾ ಅರ್ಜಿ

08:00 AM Nov 09, 2017 | |

ಹೊಸದಿಲ್ಲಿ: ಪ್ಯಾರಡೈಸ್‌ ಪೇಪರ್ಸ್‌ ಹೆಸರಿನಲ್ಲಿ ವಿದೇಶಿ ಹೂಡಿಕೆ ಅಕ್ರಮ ಬಹಿರಂಗಗೊಳಿಸಿದ ಆಂಗ್ಲ ಪತ್ರಿಕೆ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಅಂಗೀಕರಿಸುವಂತೆ ರಾಜ್ಯಸಭೆ ಸದಸ್ಯ ಆರ್‌.ಕೆ. ಸಿನ್ಹಾ ಕೋರಿದ್ದಾರೆ. 

Advertisement

ಈ ಬಗ್ಗೆ ಸಭಾಪತಿ ವೆಂಕಯ್ಯ ನಾಯ್ಡುಗೆ ಸಿನ್ಹಾ ಪತ್ರ ಬರೆದಿದ್ದು, ತನ್ನ ಒಡೆತನದ ಸಂಸ್ಥೆ ಸೆಕ್ಯುರಿಟಿ ಆ್ಯಂಡ್‌ ಇಂಟಲಿಜೆನ್ಸ್‌ (ಎಸ್‌ಐಎಸ್‌) ತೆರಿಗೆ ತಪ್ಪಿಸಿ ವಹಿವಾಟು ನಡೆಸಿಲ್ಲ ಎಂದಿದ್ದಾರೆ. ಎಸ್‌ಐಎಸ್‌ ಏಷ್ಯಾ ಪೆಸಿಫಿಕ್‌ ಹೋಲ್ಡಿಂಗ್ಸ್‌ ಲಿ. ಎಂಬ ಮಾಲ್ಟಾ ಮೂಲದ ಕಂಪನಿಯಿಂದ ಎಸ್‌ಐಎಸ್‌ ಹೂಡಿಕೆ ಪಡೆದಿದೆ ಎಂದು ಪ್ಯಾರಡೈಸ್‌ ಪೇಪರ್ಸ್‌ ವರದಿ ಹೇಳಿತ್ತು. ನಾನು ಎಸ್‌ಐಎಸ್‌ನಲ್ಲಿ ನಾಮನಿರ್ದೇಶಿತ ನಿರ್ದೇಶಕನಾಗಿ ಕೇವಲ ಒಂದು ಷೇರು ಹೊಂದಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next