Advertisement
ಗೆಳೆಯರೊಂದಿಗೆ ಮನೆಯ ಟೆರೆಸ್‌ನಲ್ಲಿ ಪಟಾಕಿ ಹಚ್ಚುವ ಸಂದರ್ಭದಲ್ಲಿ, ಬಾಲಕಿ ಧರಿಸಿದ್ದ ಬಟ್ಟೆಗೆ ಬೆಂಕಿ ಹಿಡಿದಿದ್ದು, ಈ ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಆರು ವರ್ಷದ ಬಾಲಕಿ ಅಸುನೀಗಿದ್ದಾಳೆ.
Related Articles
Advertisement
ಬಾಲಕಿಯ ಸ್ಥಿತಿ ಗಂಭೀರವಾದ ಕಾರಣ ಏರ್ ಆಂಬುಲೆನ್ಸ್ ಮೂಲಕ ದೆಹಲಿ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದುರಾದೃಷ್ಟವಶಾತ್ ದಾರಿ ಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ತನ್ನ ಮೊಮ್ಮೊಗಳ ಚಿಕಿತ್ಸೆಯ ಕುರಿತಾಗಿ ಸಂಸದೆ ರೀಟಾ ಜೋಶಿ ಅವರು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಜೊತೆ ಮಾತುಕತೆ ನಡೆಸಿದ್ದರು.