Advertisement

ದಸರೆಯಲ್ಲಿ ಟಿಪ್ಪು ಜಯಂತಿ ವಿವಾದ

06:00 AM Oct 11, 2018 | Team Udayavani |

ಮೈಸೂರು: ಟಿಪ್ಪು ಜಯಂತಿ ಆಚರಣೆ ರದ್ದು ಮಾಡುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಮನವಿ ಮಾಡಿದ ಪ್ರಸಂಗ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ನಡೆಯಿತು. 

Advertisement

ನಗರದ ಚಾಮುಂಡಿಬೆಟ್ಟದಲ್ಲಿ ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರತಾಪ್‌ ಸಿಂಹ, ದಸರಾ ಭಾರತೀಯ, ಹಿಂದೂ ಪರಂಪರೆಯ ಪ್ರತೀಕ. ಯದು ಕುಲದವರು ಆರಂಭಿಸಿದ ದಸರಾ ಆಚರಣೆ ತಡೆಯುವ ಪ್ರಯತ್ನ ಸರಿಯಲ್ಲ. ಜೊತೆಗೆ ಮೈಸೂರು ಅರಸರಿಗೆ ಉಪಟಳ ನೀಡಿದವರ ಜಯಂತಿ ಆಚರಣೆಯೂ ಬೇಡ ಎನ್ನುವ ಮೂಲಕ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿದ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಟಿಪ್ಪು ಜಯಂತಿ ರದ್ದು ಮಾಡುವಂತೆ ಮನವಿ ಮಾಡಿದರು.

ಪ್ರತಿಕ್ರಿಯೆ ನೀಡದ ಸಿಎಂ: ಬಳಿಕ, ಕಲಾಮಂದಿರದಲ್ಲಿ ನಡೆದ ಚಲನಚಿತ್ರೋತ್ಸವ ಉದ್ಘಾಟನೆಯಲ್ಲಿ ಪಾಲ್ಗೊಂಡ ಸಿಎಂ
ಕುಮಾರಸ್ವಾಮಿ, ಸಂಸದ ಪ್ರತಾಪ್‌ ಸಿಂಹ ಮಾಡಿದ ಮನವಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸದ್ಯ ಯಾವುದೇ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ದಸರಾ ಆಚರಣೆ ಮುಗಿದ ನಂತರ ಆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಸದ್ಯ ದಸರಾ ಮಹೋತ್ಸವವನ್ನು ಉತ್ತಮವಾಗಿ ನಡೆಸುವುದಷ್ಟೇ ನಮ್ಮ ಮುಂದಿನ ಗುರಿ ಎಂದರು.

ಟಿಪ್ಪು ಜಯಂತಿ ನಿಲ್ಲಲ್ಲ: ಸಚಿವ ಜಮೀರ್‌
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್‌ ಅಹಮದ್‌ ಖಾನ್‌, ಲೋಕಸಭೆ ಚುನಾವಣೆ ಇನ್ನು ನಾಲ್ಕೈದು ತಿಂಗಳಿರುವುದರಿಂದ
ರಾಜಕೀಯ ದೃಷ್ಟಿಯಿಂದ ಸಂಸದ ಪ್ರತಾಪ್‌ ಸಿಂಹ ಟಿಪ್ಪು ಜಯಂತಿ ರದ್ದು ಮಾಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಅವರು ಮನವಿ ಮಾಡಿದ ಮಾತ್ರಕ್ಕೆ ಟಿಪ್ಪು ಜಯಂತಿ ನಿಲ್ಲುವುದಿಲ್ಲ. ಮುಸಲ್ಮಾನರ ವಿರುದ್ಧ ಹೇಳಿಕೆ ನೀಡಿದರೆ ಹಿಂದೂಗಳು ತಮಗೆ ಹೆಚ್ಚು ಓಟು ಕೊಡುತ್ತಾರೆ ಎಂದು ಪ್ರತಾಪ್‌ ಸಿಂಹ ತಿಳಿದುಕೊಂಡಿದ್ದಾರೆ. 3 ವರ್ಷದಿಂದ ನಡೆಯುತ್ತಿರುವಂತೆಯೇ ಈ ವರ್ಷವೂ ಟಿಪ್ಪು ಜಯಂತಿ ನಡೆಯಲಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next