ಹೊಸದಿಲ್ಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ಆಯ್ಕೆಯಾದರು.
ಸ್ಪೀಕರ್ ಹುದ್ದೆಗಾಗಿ ನಡೆದ ಸ್ಪರ್ಧೆಯಲ್ಲಿ ಬಹುಮತವಿರುವ ಆಡಳಿತಾರೂಢ ಎನ್ ಡಿಎ ಅಭ್ಯರ್ಥಿಯಾಗಿದ್ದ ಓಂ ಬಿರ್ಲಾ ಅವರು ಧ್ವನಿ ಮತದ ಮೂಲಕ ಗೆದ್ದು ಎರಡನೇ ಅವಧಿಗೆ ಸ್ಪೀಕರ್ ಆಗಿ ಆಯ್ಕೆಯಾದರು. ಪ್ರಧಾನಿ ಮೋದಿ ಅವರು ಅಭಿನಂದಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗೆ ಅಧ್ಯಕ್ಷ ಪೀಠಕ್ಕೆ ಬಂದು ಕುಳಿತರು. ಸಂಪೂರ್ಣ ಸದನ ಎದ್ದುನಿಂತು ಗೌರವ ಸೂಚಿಸಿತು.ಓಂ ಬಿರ್ಲಾ ರಾಜಸ್ಥಾನದ ಕೋಟಾದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ವಿಪಕ್ಷ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ನ ಎಂಟು ಅವಧಿಯ ಸಂಸದ ಕೆ. ಸುರೇಶ್ ನಿರೀಕ್ಷೆಯಂತೆ ಮತಗಳ ಕೊರತೆಯಿಂದ ಸೋತರು.