ನವದೆಹಲಿ:ಭಾರತವನ್ನು ಅಸ್ಥರಗೊಳಿಸುವ ಸಂಚಿನ ಕುರಿತು ದಾಖಲೆಯನ್ನು ಅಪ್ ಲೋಡ್ ಮಾಡಿರುವ ಸ್ವೀಡನ್ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ಗೆ ಭಾರತ ಸರ್ಕಾರ “ಮಕ್ಕಳ ಶೌರ್ಯ ಪ್ರಶಸ್ತಿ” ನೀಡಬೇಕು ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಶಿರಾಡಿ ಘಾಟ್ ಎರಡನೇ ತಿರುವಿನಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್: ಸಂಚಾರ ಸ್ಥಗಿತ
ಭಾರತದ ವಿರುದ್ಧ ನಡೆಸಿರುವ ಸಂಚಿನ ಬಗ್ಗೆ ಪುರಾವೆಯನ್ನು ಅಪ್ ಲೋಡ್ ಮಾಡುವ ಮೂಲಕ ಗ್ರೆಟಾ ದೊಡ್ಡ ಸೇವೆಯನ್ನೇ ಮಾಡಿದ್ದಾರೆ. ಅದಕ್ಕಾಗಿ ನಾನು ಆಕೆಗೆ ಭಾರತ ಸರ್ಕಾರ ಮಕ್ಕಳ ಶೌರ್ಯ ಪ್ರಶಸ್ತಿ ನೀಡಬೇಕೆಂದು ಸಲಹೆ ನೀಡುವುದಾಗಿ ಲೇಖಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಲೇಖಿ ಅವರು, “ಆಕೆ ಇನ್ನೂ ಬಾಲಕಿ, ಗ್ರೆಟಾ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡುವ ಜನರನ್ನು ತಿರಸ್ಕಾರದಿಂದ ನೋಡುತ್ತೇನೆ. ಆ ಬಾಲಕಿಗೆ ಪೈರಿನ ಸುಡುವಿಕೆಯಾಗಲಿ ಅಥವಾ ಬೆಳೆಗಳ ವೈವಿಧ್ಯಕರಣ ಸುಸ್ಥಿರ ಕೃಷಿಯಾಗಲಿ ಮತ್ತು ಜಲ ಸಂಪನ್ಮೂಲ ನಿರ್ಮಹಣೆ ಬಗ್ಗೆ ತಿಳಿದಿಲ್ಲದಿದ್ದರೂ ನಾಮಿನೇಟ್ ಮಾಡಲಾಗಿದೆ. ಇದು ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ” ಎಂದು ಕಿಡಿಕಾರಿದ್ದಾರೆ.
ದೆಹಲಿಯ ಗಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳಿಗೆ ಸ್ವೀಡನ್ ಹೋರಾಟಗಾರ್ತಿ ಗ್ರೆಟ್ ಥನ್ ಬರ್ಗ್ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಳು. ಟ್ವೀಟ್ ನಲ್ಲಿ ಹೋರಾಟದ ಸಂಪೂರ್ಣ ನೀಲನಕ್ಷೆಯ ಟೂಲ್ ಕಿಟ್ ಅನ್ನು ಟ್ವೀಟ್ ಮಾಡಿದ್ದು, ರೈತರು ಯಾವ ದಿನ, ಯಾವ ಹೆಜ್ಜೆ ಇಡಬೇಕು? ಹೇಗೆ ಹೋರಾಟ ಮಾಡಬೇಕು? ಎಂಬುದರ ಕುರಿತ ವಿವರಣೆಯ ಪಿಡಿಎಫ್ ಮಾದರಿ ಟೂಲ್ ಕಿಟ್ ನಲ್ಲಿತ್ತು.