Advertisement

ಓಂ ಬಿರ್ಲಾ ಲೋಕ ಸ್ಪೀಕರ್‌

10:51 AM Jun 20, 2019 | mahesh |

ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ರಾಜಸ್ಥಾನದ ಕೋಟಾ-ಬುಂಡಿ ಕ್ಷೇತ್ರದ ಬಿಜೆಪಿ ಸಂಸದ ಓಂ ಬಿರ್ಲಾ ಅವರು ಹೆಚ್ಚು ಕಡಿಮೆ 17ನೇ ಲೋಕಸಭೆಯ ಸ್ಪೀಕರ್‌ ಆಗುವುದು ಖಚಿತವಾಗಿದೆ.

Advertisement

ಬುಧವಾರ ನಡೆಯಲಿರುವ ಸ್ಪೀಕರ್‌ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಸಲು ಎನ್‌ಡಿಎ ನಿರ್ಧಾರ ಕೈಗೊಂಡಿದೆ. ವಿಪಕ್ಷಗಳೂ ಇವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.

ಬಿರ್ಲಾ ಆಯ್ಕೆಯಲ್ಲೂ ಪ್ರಧಾನಿ ಮೋದಿ-ಅಮಿತ್‌ ಶಾ ಜೋಡಿ ‘ರಹಸ್ಯ’ ಕಾಯ್ದುಕೊಳ್ಳುವ ಮೂಲಕ, ಪ್ರಮುಖ ರಾಜಕೀಯ ನೇಮಕಗಳಲ್ಲಿ ಗೋಪ್ಯತೆ ಕಾಯ್ದುಕೊಳ್ಳುವ ತಮ್ಮ ಚಾಣಾಕ್ಷತೆಯನ್ನು ಮುಂದುವರಿಸಿದ್ದಾರೆ.

56 ವರ್ಷದ ಬಿರ್ಲಾ ಅವರು ಎರಡನೇ ಬಾರಿಗೆ ಸಂಸದರಾಗಿದ್ದರೂ, ಇತರೆ ಎಲ್ಲ ಹಿರಿಯ ದಿಗ್ಗಜರನ್ನು ಬಿಟ್ಟು ಇವರನ್ನೇ ಬಿಜೆಪಿ ಆಯ್ಕೆ ಮಾಡಿಕೊಂಡಿರುವ ಹಿಂದೆ ಹಲವು ಕಾರಣಗಳೂ ಇವೆ ಎಂದು ವಿಶ್ಲೇಷಿಸಲಾಗಿದೆ. ಓಂ ಬಿರ್ಲಾ ಅವರು ರಾಜಸ್ಥಾನ ಅಸೆಂಬ್ಲಿಯಲ್ಲಿ 3 ಅವಧಿಗೆ ಸದಸ್ಯರಾಗಿದ್ದವರು. ಅಲ್ಲದೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಾಜ ಸ್ಥಾನ ಸರ್ಕಾರದಲ್ಲಿ ಸಂಸದೀಯ ಕಾರ್ಯ ದರ್ಶಿಯಾಗಿಯೂ ಅವರು ಕಾರ್ಯ ನಿರ್ವ ಹಿಸಿದ್ದಾರೆ. ಪ್ರಧಾನಿ ಮೋದಿ ಅವರು ಗುಜ ರಾತ್‌ನಲ್ಲಿ ಅಧಿಕಾರಕ್ಕೇರುವ ಮುಂಚೆಯೇ ಮೋದಿ ಹಾಗೂ ಅಮಿತ್‌ ಶಾ ಅವರೊಂದಿಗೆ ಬಿರ್ಲಾ ಕುಟುಂಬ ಒಡನಾಟ ಹೊಂದಿತ್ತು.

ಅಮಿತ್‌ ಶಾ ಆಪ್ತ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿ ರುವ ಬಿರ್ಲಾ, ಬಿಜೆಪಿಯ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರಾ ಗಿಯೂ ಸೇವೆ ಸಲ್ಲಿಸಿ ದ್ದಾರೆ. ಅಲ್ಲದೆ, ದಿವ್ಯಾಂಗರು ಹಾಗೂ ಅಸ ಹಾಯಕ ಮಹಿಳೆಯರಿಗೆ ನೆರವಾಗುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. 2001ರ ಜನವರಿಯಲ್ಲಿ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ, 100ಕ್ಕೂ ಹೆಚ್ಚು ಸ್ವಯಂ ಸೇವಾ ಸಿಬ್ಬಂದಿಯ ತಂಡವನ್ನು ಕಟ್ಟಿ, ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕ್ಕಾಗಿ ನಡೆದ ಹೋರಾಟದ ವೇಳೆ ಸಕ್ರಿಯವಾಗಿ ಪಾಲ್ಗೊಂಡು, ಜೈಲು ವಾಸವನ್ನೂ ಅನುಭವಿಸಿ ದ್ದಾರೆ ಬಿರ್ಲಾ. ಬಿಜೆಪಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಪಿ. ನಡ್ಡಾ ಅವರೊಂದಿಗೂ ಬಿರ್ಲಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೆ, ಬಿರ್ಲಾ ಅವರ ಬಲಿಷ್ಠ ಬೂತ್‌ ನಿರ್ವಹಣೆ ಸಾಮರ್ಥ್ಯ, ಕ್ಷೇತ್ರದ ಮೇಲೆ ಹೇಗೆ ಹಿಡಿತ ಸಾಧಿಸಬೇಕು ಎಂಬ ಕೌಶಲ್ಯ ಕೂಡ ಅವರನ್ನು ಈ ಉನ್ನತ ಹುದ್ದೆಗೇರಿಸಿದೆ ಎಂದು ಹೇಳಲಾಗಿದೆ.

Advertisement

ಪಕ್ಷದೊಳಗಿನವರಿಗೂ ಗೊತ್ತಿರಲಿಲ್ಲ: ಬಿರ್ಲಾ ಅವರ ಆಯ್ಕೆ ಕುರಿತು ಮೋದಿ-ಅಮಿತ್‌ ಶಾ ಸೀಕ್ರೆಸಿ ಕಾಯ್ದುಕೊಂಡಿದ್ದರು. ಈ ವಿಚಾರ ಕೊನೇ ಕ್ಷಣದವರೆಗೂ ಪಕ್ಷದೊಳಗಿನ ಅನೇಕ ನಾಯಕರಿಗೆ ಗೊತ್ತೇ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ರಾಷ್ಟ್ರಪತಿ ನೇಮಕದ ವೇಳೆಯೂ ರಾಮನಾಥ್‌ ಕೋವಿಂದ್‌ ಅವರ ಹೆಸರನ್ನು ಎನ್‌ಡಿಎ ಘೋಷಿಸುತ್ತಿದ್ದಂತೆ, ಎಲ್ಲರಲ್ಲೂ ಅಚ್ಚರಿ ಮನೆ ಮಾಡಿತ್ತು. ರಾಷ್ಟ್ರಪತಿ ಹುದ್ದೆಗೆ ಹಲವರ ಹೆಸರುಗಳನ್ನು ಕೇಳಿಬಂದಿತ್ತಾದರೂ, ಎನ್‌ಡಿಎ ಆಯ್ಕೆ ಯಾರು ಎಂಬುದು ಗೊತ್ತಾಗಿದ್ದು ಹೆಸರು ಘೋಷಣೆಯಾದ ಬಳಿಕವೇ. ಇದಿಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಮರಾಠೇತರ ಸಿಎಂ, ಹರ್ಯಾ ಣದಲ್ಲಿ ಜಾಟ್ ಸಮುದಾಯದವರಲ್ಲದ ನಾಯಕ, ಉತ್ತರಪ್ರದೇಶದಲ್ಲಿ ಫೈರ್‌ ಬ್ರಾಂಡ್‌ ಯೋಗಿ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿ ಯನ್ನಾಗಿ ಆಯ್ಕೆ ಮಾಡಿದ್ದನ್ನು ಕೂಡ ಮೋದಿ-ಶಾ ಮಾಸ್ಟರ್‌ಸ್ಟ್ರೋಕ್‌ ಎಂದು ಬಣ್ಣಿಸಲಾಗಿತ್ತು.

ಪ್ರತಿಪಕ್ಷಗಳ ಬೆಂಬಲ: ಲೋಕಸಭೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಹೊಂದಿರುವುದರಿಂದ ಓಂ ಬಿರ್ಲಾ ಗೆಲುವು ಖಚಿತ. ಜತೆಗೆ ಬಿರ್ಲಾ ಅವರ ಆಯ್ಕೆಗೆ ಕಾಂಗ್ರೆಸ್‌ ಸೇರಿದಂತೆ ಬಹುತೇಕ ಎಲ್ಲ ಪ್ರತಿಪಕ್ಷಗಳೂ ಒಪ್ಪಿಗೆ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next