Advertisement

ಟ್ರ್ಯಾಕ್ಟರ್‌ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ

09:00 AM Apr 06, 2019 | Vishnu Das |

ಮಥುರಾ: ಬಿಜೆಪಿ ಸಂಸದೆ ಮತ್ತು ಮಥುರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಖ್ಯಾತ ನಟಿ, ಚಿರ ಯೌವ್ವನೆ ಖ್ಯಾತಿಯ ಹೇಮಾಮಾಲಿನಿ ಅವರು ಟ್ರ್ಯಾಕ್ಟರ್‌ ಚಲಾಯಿಸಿ ಮತ್‌ತೊಮ್ಮೆ ರೈತರ ಮನ ಗೆಲ್ಲಲು ಮುಂದಾಗಿದ್ದಾರೆ.

Advertisement

ಮಥುರಾ ಕ್ಷೇತ್ರದ ಗೋವರ್ಧನ್‌ನಲ್ಲಿ ಭರ್ಜರಿ ಮತ ಬೇಟೆಯಲ್ಲಿ ನಿರತರಾಗಿರುವ 70 ರ ಹರೆಯದ ಹೇಮಾ ಮಾಲಿನಿ ಹೋಲದಲ್ಲಿ ಟ್ರ್ಯಾಕ್ಟರ್‌ ಏರಿ ನಾನು ಎಂದಿಗೂ ರೈತ ಪರ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಹೊಲಕ್ಕೆ ಇಳಿದು ಭತ್ತದ ಬೆಳೆ ಕಟಾವು ಮಾಡಿ ತಮ್ಮ ರೈತಪರ ನಿಲುವನ್ನು ಹೇಮಾ ಪ್ರದರ್ಶಿಸಿದ್ದರು.

ಹೇಮಾ ಮಾಲಿನಿ ಅವರು ಬಿಜೆಪಿ ಸ್ಟಾರ್‌ ಪ್ರಚಾರಕಿಯರಲ್ಲಿ ಒಬ್ಬರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next