Advertisement

ಬಿಜೆಪಿ ಸಭಾತ್ಯಾಗ , ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

12:40 AM Feb 09, 2019 | Team Udayavani |

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದ ವಿಪಕ್ಷ ಬಿಜೆಪಿ ಬಜೆಟ್‌ಗೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿತ್ತಾ ದರೂ ಬಜೆಟ್ ಪ್ರತಿ ಮೊದಲೇ ನೀಡದ ಕಾರಣ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ತೋರಿತು.

Advertisement

ಸದಸ್ಯರಿಗೆ ಬಜೆಟ್ ಪ್ರತಿ ನೀಡದೆ ಮುಖ್ಯಮಂತ್ರಿಯವರು ಬಜೆಟ್ ಭಾಷಣ ಮುಂದುವರಿಸಿದ್ದರಿಂದ ‘ಅಯ್ಯಯ್ಯೋ ಆನ್ಯಾಯ’ ಎಂದು ಘೋಷಣೆ ಹಾಕಿ ಸರಕಾರದ ವಿರುದ್ಧ ಬಿಜೆಪಿ ಅತೃಪ್ತಿ ವ್ಯಕ್ತಪಡಿಸಿತು. ಜತೆಗೆ ಕುಮಾರಸ್ವಾಮಿ ಬೆಳಗ್ಗೆ ಆಡಿಯೋ ಬಿಡುಗಡೆ ಮಾಡಿದ್ದನ್ನು ಪ್ರಸ್ತಾವಿಸಿ, ಅದರಲ್ಲಿ ಸ್ಪೀಕರ್‌ ವಿರುದ್ಧವೇ ಆರೋಪ ಮಾಡಲಾಗಿದೆ. ಸ್ಪೀಕರ್‌ ಅವರು ಉತ್ತರಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಇದ್ಯಾವುದನ್ನೂ ಲೆಕ್ಕಿಸದೆ ಕುಮಾರಸ್ವಾಮಿ ಯವರು ಬಜೆಟ್ ಭಾಷಣ ಓದುವುದರಲ್ಲಿ ನಿರತರಾಗಿದ್ದರು. ಅನಂತರ ಯಡಿಯೂರಪ್ಪ ಅವರು, ಬಜೆಟ್ ಪ್ರತಿ ಸಹ ಕೊಡದೆ ಬಜೆಟ್ ಓದುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೊರಟರು. ಸರಕಾರದ ವಿರುದ್ಧ ಘೋಷಣೆ ಹಾಕುತ್ತಲೇ ಬಿಜೆಪಿ ಸದಸ್ಯರು ನಿರ್ಗಮಿಸಿದರು.

ಈ ಮಧ್ಯೆ ಮುಖ್ಯಮಂತ್ರಿಯವರು ಬಜೆಟ್ ಭಾಷಣ ಓದುವಾಗ ಅಪರಾಹ್ನ 2.30ರ ಸಮಯದಲ್ಲಿ ಬಿಜೆಪಿಯ ಮಾಧುಸ್ವಾಮಿ, ಕುಮಾರ ಬಂಗಾರಪ್ಪ ಅವರು ಸದನಕ್ಕೆ ಆಗಮಿಸಿ, ಬಜೆಟ್ ಪ್ರತಿ ಸೋರಿಕೆಯಾಗಿದೆ. ಆದರೂ ನೀವು ಸದಸ್ಯರಿಗೆ ನೀಡಿಲ್ಲ ಎಂದು ದೂರಿದರು. ಆದರೆ ಸ್ಪೀಕರ್‌ ಅವರು ಅದಕ್ಕೆ ಪ್ರತಿಕಿಯಿಸದೆ ಕುಳಿತುಕೊಳ್ಳಿ ಇಲ್ಲವೇ ಹೊರಗೆ ಹೋಗಿ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next