ಅಹಮದಾಬಾದ್: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ಶಾಸಕರೊಬ್ಬರು ರಕ್ಷಣೆ ಮಾಡಿರುವ ಘಟನೆ ಗುಜರಾತಿನ ಪಟ್ವಾ ಗ್ರಾಮದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ(ಮೇ.31 ರಂದು) ಪಟ್ವಾ ಗ್ರಾಮದ ಬಳಿಯ ಸಮುದ್ರ ತೀರಕ್ಕೆ ಸ್ನಾನಕ್ಕೆಂದು ಕಲ್ಪೇಶ್ ಶಿಯಾಲ್, ವಿಜಯ್ ಗುಜಾರಿಯಾ, ನಿಕುಲ್ ಗುಜಾರಿಯಾ ಮತ್ತು ಜೀವನ್ ಗುಜಾರಿಯಾ ಎನ್ನುವ ಯುವಕರು ಇಳಿದಿದ್ದಾರೆ. ಈ ವೇಳೆ ಸಮುದ್ರ ಅಲೆಗೆ ಸಿಲುಕಿ ನಾಲ್ವರು ಮುಳುಗಲು ಆರಂಭಿಸಿದ್ದಾರೆ. ಮುಳುಗುತ್ತಿದ್ದಂತೆ ಯುವಕರು ಕಾಪಾಡಿ ಎಂದು ಕಿರುಚಾಡಲು ಶುರು ಮಾಡಿದ್ದಾರೆ.
ಇದೇ ವೇಳೆ ಸ್ಥಳೀಯರು ಸೇರಿದಂತೆ ಅಲ್ಲೇ ಇದ್ದ ಗುಜರಾತ್‌ನ ರಾಜುಲಾದ ಬಿಜೆಪಿ ಶಾಸಕರಾಗಿರುವ ಹೀರಾ ಸೋಲಂಕಿ ಅವರು ರಕ್ಷಣೆಗೆ ಧಾವಿಸಿದ್ದಾರೆ. ತಾನೊಬ್ಬ ಶಾಸಕ ಎನ್ನುವುದನ್ನು ನೋಡದೇ ನೇರವಾಗಿ ಜೀವ ರಕ್ಷಣೆಗೆ ಹೀರಾ ಸೋಲಂಕಿ ಸಮುದ್ರಕ್ಕೆ ಹಾರಿದ್ದಾರೆ.
ನಾಲ್ವರಲ್ಲಿ ಮೂವರನ್ನು ರಕ್ಷಣೆ ಮಾಡಿದ್ದು, ಒಬ್ಬ ಆಳ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆತನ ಮೃತದೇಹ ಸಂಜೆಯ ವೇಳೆ ಪತ್ತೆಯಾಗಿದೆ.
Related Articles