ಬೆಂಗಳೂರು: ಕೊಪ್ಪಳದ ಕನಕಗಿರಿ ಎಸ್‌ಟಿ ಮೀಸಲು ಕ್ಷೇತ್ರದ ಶಾಸಕ ಬಸವರಾಜ್ ದಡೇಸಗೂರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಯಿತು.
ಸಚಿವ ವೆಂಕಟರಾವ್ ನಾಡಗೌಡ ಅವರೊಂದಿಗೆ ಆಗಮಿಸಿದ ದಡೇಸಗೂರ್ ಅವರು ಸಿಎಂ ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಆಪರೇಷನ್ ಕಮಲ ನಡೆದರೆ ಪ್ರತಿಯಾಗಿ ಆಪರೇಷನ್ ಮೈತ್ರಿ ನಡೆಸಲು ಸಿದ್ದತೆ ನಡೆಸಲಾಗಿದೆ ಎನ್ನುವ ಬೆನ್ನಲ್ಲೇ ದಡೇಸಗೂರ್ ಅವರು ಸಿಎಂ ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಯಿತು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ದಡೇಸಗೂರ್ ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುತ್ತಿಲ್ಲ. ಎಲ್ಲಾ ಸುಳ್ಳು ಸುದ್ದಿಗಳು. ನಾನು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕಾಗಿ ಸಚಿವರೊಂದಿಗೆ ಸಿಎಂ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ.