Advertisement

ಮಹಾರಾಷ್ಟ್ರ; ಸೋದರ ಸಂಬಂಧಿ ಎದುರು ಬಿಜೆಪಿಯ ಪಂಕಜಾ ಮುಂಡೆಗೆ ಸೋಲು

09:43 AM Oct 26, 2019 | Nagendra Trasi |

ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ದೇವೇಂದ್ರ ಫಡ್ನವೀಸ್ ಸರಕಾರದಲ್ಲಿ ಸಚಿವೆಯಾಗಿದ್ದ ಪಂಕಜಾ ಮುಂಡೆ ಪಾರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸಂಬಂಧಿ ಎನ್ ಸಿಪಿಯ ಧನಂಜಯ್ ಮುಂಡೆ ಎದುರು ಪರಾಜಯಗೊಂಡಿದ್ದಾರೆ.

Advertisement

ಪಂಕಜಾ ಮುಂಡೆ ತಮ್ಮ ಪ್ರತಿಸ್ಪರ್ಧಿ ಸಹೋದರ ಸಂಬಂಧಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಧನಂಜಯ್  ಮುಂಡೆ ಎದುರು 22 ಸಾವಿರ ಮತಗಳ ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.

ಗೋಪಿನಾಥ್ ಮುಂಡೆ ಪುತ್ರಿಯಾಗಿರುವ ಪಂಕಜಾ ಮುಂಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿ ರಾಜಕಾರಣಿ ಹಾಗೂ ಫಯರ್ ಬ್ರ್ಯಾಂಡ್ ಆಗಿ ಹೆಸರು ಗಳಿಸಿದ್ದರು. 2017ರಲ್ಲಿ ಪವರ್ ಫುಲ್ ರಾಜಕಾರಣಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು.

ಧನಂಜಯ್ ಪಂಡಿತ್ ರಾವ್ ಮುಂಡೆ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದಾರೆ. ಧನಂಜಯ್ ಗೋಫಿನಾಥ್ ಮುಂಡೆ ಅವರ ಸಹೋದರ ಸಂಬಂಧಿ.

Advertisement

Udayavani is now on Telegram. Click here to join our channel and stay updated with the latest news.

Next